Sunday, September 20, 2026

BDA Apartments

ಮಂತ್ರಿ ಸ್ಥಾನಕ್ಕಾಗಿ ಕೈಕಾಲು ಹಿಡಿಯುವ ಕೀಳು ರಾಜಕಾರಣ ಮಾಡಲ್ಲ- ಶಾಸಕ ಬಸನಗೌ...
Home Front Page ಮಂತ್ರಿ ಸ್ಥಾನಕ್ಕಾಗಿ ಕೈಕಾಲು ಹಿಡಿಯುವ ಕೀಳು ರಾಜಕಾರಣ ಮಾಡಲ್ಲ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

ಮಂತ್ರಿ ಸ್ಥಾನಕ್ಕಾಗಿ ಕೈಕಾಲು ಹಿಡಿಯುವ ಕೀಳು ರಾಜಕಾರಣ ಮಾಡಲ್ಲ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…

ಬಾಗಲಕೋಟೆ,ಆ,22,2019(www.justkannada.in):  ಮಂತ್ರಿ ಸ್ಥಾನಕ್ಕಾಗಿ ಯಾರ ಕೈಕಾಲು ಹಿಡಿಯುವ ಕೀಳು ರಾಜಕಾರಣ ಮಾಡಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಸ್ಥಾನಕ್ಕಾಗಿ ನಾನು ಯಾರ ಬಳಿಯೂ ಲಾಬಿ ಮಾಡಿಲ್ಲ.  ಮಂತ್ರಿಗಿರಿ ಪಡೆಯಲು ಯಾವುದೇ ಸ್ವಾಮೀಜಿ  ಮೂಲಕ ಹೇಳಿಸಿಲ್ಲ. ನಾನು ಹಿರಿಯ ನಾಯಕ. ಕೈಕಾಲು ಹಿಡಿದು ಸಚಿವ ಸ್ಥಾನ ಕೇಳುವ ಕೀಳುಮಟ್ಟದ ರಾಜಕಾರಣ ಮಾಡಲ್ಲ ಎಂದರು.

ನನಗೆ ಇನ್ನು ಸಮಯ ಇದೆ. 75 ವಯಸ್ಸಾಗಿದ್ರೆ ನಿವೃತ್ತಿಪಡಿಸುತ್ತಿದ್ದರು. ಬಿಜೆಪಿಯಲ್ಲಿ ಈಗ ಎಲ್.ಕೆ ಅಡ್ವಾಣಿ ಸ್ಥಿತಿ ಏನಾಗಿದೆ ಎಂಬುದು ಗೊತ್ತು ಎಂದು ಯತ್ನಾಳ್ ಹೈಕಮಾಂಡ್ ಗೆ ಪರೋಕ್ಷ ಟಾಂಗ್ ನೀಡಿದರು.

Key words: bagalakote- MLA-Basanagowda patil yatnal-minister-post