Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ: ಯಾವ ಶಕ್ತಿ ಕೂಡ ತಡೆಯಲು ಸಾಧ್ಯವಿಲ್ಲ- ಮಾಜಿ ಸಿಎಂ...

ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ: ಯಾವ ಶಕ್ತಿ ಕೂಡ ತಡೆಯಲು ಸಾಧ್ಯವಿಲ್ಲ- ಮಾಜಿ ಸಿಎಂ ಬಿಎಸ್ ವೈ ವಿಶ್ವಾಸ.

ಬೆಂಗಳೂರು,ಫೆಬ್ರವರಿ,4,2023(www.justkannada.in): ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ. ಇದನ್ನ ಯಾವ ಶಕ್ತಿ ಕೂಡ ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ 140 ಸೀಟು ಗೆಲ್ಲುತ್ತೆ. ಯಾವುದೇ ಸಂಶಯ ಬೇಡ.  ಎಸ್.ಸಿ ಮತ್ತು ಎಸ್ಟಿ ಹಿಂದುಳಿದವರ ಸಮಸ್ಯೆ ಪರಿಹಾರದ ಕಡೆ  ಗಮನ ಕೊಡಲಾಗಿದೆ.  ಗೋಹತ್ಯೆ ನಿಷೇಧೀಸುವ ಕೆಲಸ ಮಾಡಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕೆಲಸ ಆರಂಭವಾಗಿದೆ.

ನೇಕಾರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಗ್ರಾಮ ಒನ್ ಯೋಜನೆ  ಜಾರಿ ಮಾಡಿದ್ದೇವೆ.  ಭದ್ರ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5300 ಕೋಟಿ  ರೂ. ನೀಡಿದೆ. ನಮ್ಮ ಸರ್ಕಾರದ ಕೆಲಸಗಳನ್ನ ನೋಡಿ ಜನರು ಮತ್ತೆ ಬಿಜೆಪಿ ಅಧಿಕಾರಕ್ಕೆ ತರುತ್ತಾರೆ ಎಂದು ಬಿಎಸ್ ವೈ ನುಡಿದರು.

Key words: BJP- will -come -power Former CM- BS Yeddyurappa