ಮೈಸೂರು,ಫೆಬ್ರವರಿ,2,2023(www.justkannada.in): ಮೈಸೂರು ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ದಿಢೀರ್ ಮುಂದೂಡಿಕೆಯಾದ ಹಿನ್ನೆಲೆ ಕಾಂಗ್ರೆಸ್ ಸದಸ್ಯರು ಪಾಲಿಕೆ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.![]()
ಚುನಾವಣೆ ದಿಢೀರ್ ಮುಂದೂಡಿಕೆ ಹಿನ್ನೆಲೆ ಮೇಯರ್ ಶಿವಕುಮಾರ್ ವಿರುದ್ದ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಹಳೇ ಕೌನ್ಸಿಲ್ ಸಭಾಂಗಣಕ್ಕೆ ಬೀಗ ಹಾಕಿ ಪ್ರತಿಭಟಿಸಿದರು. ಮೇಯರ್ ಕಚೇರಿಗೂ ಬೀಗ ಹಾಕಲು ಕಾಂಗ್ರೆಸ್ ಸದಸ್ಯರು ಯತ್ನಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಕೂಡಲೇ ಸ್ಥಳಕ್ಕೆ ಪೋಲಿಸರ ಆಗಮಿಸಿದ್ದು ಈ ವೇಳೆ ನಗರ ಪಾಲಿಕೆ ಸದಸ್ಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ ಉಂಟಾಯಿತು.
Key words: mysore -city-corporation- Standing- Committee- Election –Postponement- Protest -congress







