Sunday, September 20, 2026

BDA Apartments

ಶಾಸಕ ಯತೀಂದ್ರ ಸಿದ‍್ಧರಾಮಯ್ಯ ಮುಂದೆಯೇ ವರ್ತೂರು ಪ್ರಕಾಶ್ ಗೆ ಜೈಕಾರ BDA JK_Adv BDA Adv
Home Front Page ಶಾಸಕ ಯತೀಂದ್ರ ಸಿದ‍್ಧರಾಮಯ್ಯ  ಮುಂದೆಯೇ ವರ್ತೂರು ಪ್ರಕಾಶ್ ಗೆ ಜೈಕಾರ.

ಶಾಸಕ ಯತೀಂದ್ರ ಸಿದ‍್ಧರಾಮಯ್ಯ  ಮುಂದೆಯೇ ವರ್ತೂರು ಪ್ರಕಾಶ್ ಗೆ ಜೈಕಾರ.

ಕೋಲಾರ,ಜನವರಿ,30,2023(www.justkannada.in): ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸಿದ‍್ಧರಾಮಯ್ಯ ಘೋಷಣೆ ಹಿನ್ನೆಲೆಯಲ್ಲಿ ಈ ನಡುವೆ  ಶಾಸಕ ಯತೀಂದ್ರ ಸಿದ್ಧರಾಮಯ್ಯ ಅವರು ಇಂದು ಕೋಲಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸಭೆಗಳನ್ನ ನಡೆಸುತ್ತಿದ್ದಾರೆ.

ಇಂದು ಕೋಲಾರಮ್ಮ ದೇಗುಲಕ್ಕೆ ಭೇಟಿ ನೀಡಿದ ಬಳಿಕ ತಾಲ್ಲೂಕಿನ ಕಳ್ಳೀಪುರದಲ್ಲಿ ಗ್ರಾಮಸ್ಥರ ಜೊತೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ಸಭೆ ನಡೆಸಿದರು. ಸಭೆ ನಡೆಸಿ ತೆರಳುತ್ತಿದ್ದ ವೇಳೆಯೇ ವ್ಯಕ್ತಿಯೊಬ್ಬ ಶಾಸಕ ಯತೀಂದ್ರ ಸಿದ್ಧರಾಮಯ್ಯ ಮುಂದೆ ಕೋಲಾರ ಬಿಜೆಪಿ ಟಿಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ಗೆ ಜೈಕಾರ ಕೂಗಿದ್ದಾನೆ.

ಈ ವೇಳೆ ಶಾಸಕ ಯತೀಂದ್ರ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರು ತಬ್ಬಿಬ್ಬಾದರು. ನಂತರ  ಘೋಷಣೆ ಕೂಗಿದವರನ್ನ ಕರೆಸಿ ಯತೀಂದ್ರ ಸಿದ್ಧರಾಮಯ್ಯ ಮಾತನಾಡಿದರು. ಇದಾದ ಬಳಿಕ  ಸಿದ್ಧರಾಮಯ್ಯ ಪರ ಜೈಕಾರ ಕೂಗಿದ ಘಟನೆ ನಡೆಯಿತು.

Key words: MLA- Yatindra Siddaramaiah –kolar- Varthur Prakash