Friday, August 14, 2026

BDA Apartments

Home Front Page ಬಸವಣ್ಣ, ಅಂಬೇಡ್ಕರ್ ವಿಚಾರಗಳ ವಿರುದ್ಧ ಬಿಜೆಪಿ ಮತ್ತು ಆರ್ ಎಸ್ ಎಸ್ ನಿಂದ ಹೋರಾಟ- ಸತೀಶ್...

ಬಸವಣ್ಣ, ಅಂಬೇಡ್ಕರ್ ವಿಚಾರಗಳ ವಿರುದ್ಧ ಬಿಜೆಪಿ ಮತ್ತು ಆರ್ ಎಸ್ ಎಸ್ ನಿಂದ ಹೋರಾಟ- ಸತೀಶ್ ಜಾರಕಿಹೊಳಿ ವಾಗ್ದಾಳಿ.

ಬೆಳಗಾವಿ,ಜನವರಿ,14,2023(www.justkannada.in):  ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಮನುವಾದಿಗಳು. ಅವರು ಡಾ.ಬಿಆರ್ ಅಂಬೇಡ್ಕರ್ ಮತ್ತು ಬಸವೇಶ್ವರರ ವಿಚಾರಗಳ ವಿರುದ್ಧ ಹೋರಾಟ ಮಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ,   ಆರ್ ಎಸ್ ಎಸ್ ಕಚೇರಿಯಲ್ಲಿ ಬಸವಣ್ಣನ ಫೋಟೊ ಇಡೋದಿಲ್ಲ. ಬಿಜೆಪಿ ಆಫೀಸ್ ನಲ್ಲಿ ಅಂಬೇಡ್ಕರ್ ಜಯಂತಿ ಮಾಡಲ್ಲ.  ಬಸವಣ್ಣನವರ ಫೋಟೋ ಇಡದ ಬಿಜೆಪಿ ಆರ್ ಎಸ್ ಎಸ್ ನವರು ಇನ್ನೂ ಅಂಬೇಡ್ಕರ್ ಫೋಟೊ ಇಡೋದು ದೂರದ ಮಾತು.

ಅಂಬೇಡ್ಕರ್ ಶಿವಾಜಿಗೆ ತೊಂದರ ಕೊಟ್ಟದ್ದರು.  ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಸವೇಶ್ವರರ ವಿಚಾರಗಳ ವಿರುದ್ಧ ಹೋರಾಟ ಮಾಡುವವರು ಬಿಜೆಪಿಯವರು ಎಂದು ಸತೀಶ್ ಜಾರಕಿಹೊಳಿ ಹರಿಹಾಯ್ದರು.

Key words: BJP – RSS- against – ideas -Basavanna –Ambedkar-Satish Jarakiholi