Saturday, August 15, 2026

BDA Apartments

Home Front Page ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್: ಸರ್ಕಾರ ತರಲು ಸಪ್ಲೆ ಗಿರಾಕಿ ಆಗಿ ಕೆಲಸ- ಕೆಪಿಸಿಸಿ...

ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್: ಸರ್ಕಾರ ತರಲು ಸಪ್ಲೆ ಗಿರಾಕಿ ಆಗಿ ಕೆಲಸ- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್.

ಮೈಸೂರು,ಜನವರಿ,7,2023(www.justkannada.in): ಸ್ಯಾಂಟ್ರೋ ರವಿ ಒಬ್ಬ ಬಿಜೆಪಿಯ ಪ್ರಾಡಕ್ಟ್.  ಬಿಜೆಪಿ ಸರ್ಕಾರ ತರಲು ಸ್ಯಾಂಟ್ರೋ ರವಿ ಸಪ್ಲೆ ಗಿರಾಕಿ ಕೆಲಸ ಮಾಡಿದ್ದಾನೆ. ಈ ಬಗ್ಗೆ ಹೆಚ್.ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂದು  ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಎಂ. ಲಕ್ಷ್ಮಣ್,  ಎಂಎಲ್ ಸಿ ವಿಶ್ವನಾಥ್ ಬಾಂಬೆ ಡೇಸ್ ಪುಸ್ತಕದಲ್ಲಿ ಈತನ ಬಗ್ಗೆ ಬರೆದಿದ್ದೇನೆ  ಎಂದಿದ್ದಾರೆ. ಇತನ ಪಾತ್ರ ಏನು. ಈತನನ್ನು ಬಳಸಿಕೊಂಡು ಯಾರ್ಯಾರ ಸಿಡಿ ಮಾಡಿದ್ದಾರೆ . ಇವೆಲ್ಲ ತನಿಖೆಯಿಂದ ಹೊರಬರಬೇಕು . ಸಂತ್ರಸ್ತ ಮಹಿಳೆ ಆತನ ಚರಿತ್ರೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಬಿಜೆಪಿ 60 ಜನ ರೌಡಿ ಶೀಟರ್  ಗಳನ್ನು ಪಕ್ಷಕ್ಕೆ ಸೆರ್ಪಡೆ ಮಾಡಿಕೊಳ್ಳುತ್ತಿದೆ. ಬಿಜೆಪಿಗೆ  ಸ್ಯಾಂಟ್ರೋ ರವಿಯಂತವರದ್ದೆ  ಹೆಚ್ಚಿನ ಒಡನಾಟ. ಎಂದು ಕಿಡಿಕಾರಿದರು.

ಸ್ಯಾಂಟ್ರೋ ರವಿ ಒಡನಾಟ ಅರೋಪ ಬಿಜೆಪಿ ತಳ್ಳಿಹಾಕಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ನಿಜಕ್ಕೂ ಬಿಜೆಪಿಯ ತತ್ವ ಸಿದ್ದಾಂತಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ. ಬಿಜೆಪಿಯದ್ದು ಏನಿದ್ದರೂ ಸುಳ್ಳಿನ ರಾಜಕಾರಣ. ಬಿಜೆಪಿಯ ಯಾವ ನಾಯಕರು ಸತ್ಯ ಹೇಳುತ್ತಾರೆ  ಎಂದು ವಾಗ್ದಾಳಿ ನಡೆಸಿದರು.

Key words: Santro Ravi – product – BJP- KPCC spokesperson -M. Lakshman.