Sunday, September 20, 2026

BDA Apartments

Home Front Page ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ದಚಿತ್ರಕ್ಕಿಲ್ಲ ಅವಕಾಶ: ಕೇಂದ್ರದಿಂದ ಅನುಮತಿ ನಿರಾಕರಣೆ.

ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ದಚಿತ್ರಕ್ಕಿಲ್ಲ ಅವಕಾಶ: ಕೇಂದ್ರದಿಂದ ಅನುಮತಿ ನಿರಾಕರಣೆ.

ನವದೆಹಲಿ,ಜನವರಿ,7,2023(www.justkannada.in):  ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ರಾಜ್ಯದ ಸ್ತಬ್ದಚಿತ್ರಕ್ಕೆ ಅವಕಾಶ ನೀಡಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಬೇರ ರಾಜ್ಯಗಳಿಗೆ ಅವಕಾಶ ನೀಡುವ  ಕಾರಣಕ್ಕೆ ಕರ್ನಾಟಕ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಣೆ. ಮಾಡಿದೆ.

ಕಳೆದ 13 ವರ್ಷಗಳಿಂದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಸ್ತಬ್ದಚಿತ್ರ ಪಾಲ್ಗೊಂಡಿತ್ತು. ಆದರೆ ಈ ಬಾರಿ ಗಣರಾಜ್ಯೋತ್ಸವದಲ್ಲಿ ರಾಜ್ಯದ ಸ್ತಬ್ಧಚಿತ್ರ ಇಲ್ಲ. ಕರ್ನಾಟಕ ಸರ್ಕಾರ ಸಿರಿಧಾನ್ಯ ರೇಷ್ಮೆ, ನಾರಿಶಕ್ತಿ ಸೇರಿ ನಾಲ್ಕು ವಿಷಯಗಳನ್ನ ಕೊಟ್ಟಿತ್ತು.  ಆದರೆ ಅಂತಿಮ ಹಂತ ಸಭೆಯಲ್ಲಿ ರಾಜ್ಯದ ಸ್ತಬ್ದ ಚಿತ್ರಕ್ಕೆ ಅನುಮತಿ ನಿರಾಕರಿಸಲಾಗಿದೆ.ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ದಚಿತ್ರಕ್ಕಿಲ್ಲ ಅವಕಾಶ tablo

ತಮಿಳುನಾಡು ಮತ್ತು ಕೇರಳಕ್ಕೆ ಈ ಬಾರಿ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದ್ದು,  ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿವೆ.

Key words: No chance – Karnataka-tablo – Republic Day -permission