ತಾಯಿ ಮಾಡಿದ ಸಾಲಕ್ಕೆ 14 ವರ್ಷದ ಮಗನ ಮೇಲೆ ಹಲ್ಲೆ.

ಕೊಪ್ಪ,ಳ,ಜನವರಿ,7,2023(www.justkannada.in):  ಪೋಷಕರು ಮಾಡಿದ ಸಾಲಕ್ಕೆ ಮಗನ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ  ಕೆ.ಹೊಸೂರಿನಲ್ಲಿ ಡಿಸೆಂಬರ್ 28 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕರಾಯಪ್ಪ ರಾಜೇಶ್ವರಿ ಸೇರಿ 6 ಜನರು ಹಲ್ಲೆ ನಡೆಸಿದ್ದಾರೆ. 14 ವರ್ಷದ ಬಾಲಕನ ತಾಯಿ ಮಂಜುಳ ಎಂಬುವವರು 40 ಸಾವಿರ ರೂ. ಸಾಲ ಪಡೆದಿದ್ದರು. ಮಂಜುಳ 30 ಸಾವಿರ ರೂ. ವಾಪಸ್ ನೀಡಿದ್ದರು. ಇನ್ನು 10 ಸಾವಿರ ಬಾಕಿ ಇತ್ತು.

ಈ ನಡುವೆ ಅಸಲು ಬಡ್ಡಿ ಸೇರಿ 14 ಸಾವಿರಕ್ಕೆ ಬೇಡಿಕೆ  ಇಟ್ಟಿ ಇದೀಗ ಮಂಜುಳ ಪುತ್ರ 14 ವರ್ಷದ ಬಾಲಕನನ್ನ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಕೊಪ್ಪಳ ಎಸ್ ಪಿಗೆ ದೂರು ಸಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: 14-year-old son- assaulted – debt –mother-koppal