Tuesday, September 29, 2026

BDA Apartments

ಪಡಿತರ ಅಕ್ಕಿ ಕಡಿತ ವಿಚಾರ: ಧರಿದ್ರ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ- ರಣದೀಪ್ ...
Home Front Page ಪಡಿತರ ಅಕ್ಕಿ ಕಡಿತ ವಿಚಾರ: ಧರಿದ್ರ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ- ರಣದೀಪ್ ಸಿಂಗ್ ಸುರ್ಜೇವಾಲ...

ಪಡಿತರ ಅಕ್ಕಿ ಕಡಿತ ವಿಚಾರ: ಧರಿದ್ರ ಸರ್ಕಾರ ಅಧಿಕಾರ ಬಿಟ್ಟು ತೊಲಗಲಿ- ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ.

ಬೆಂಗಳೂರು,ಜನವರಿ,5,2022(www.justkannada.in):  ಮುಂದಿನ ತಿಂಗಳಿಂದ 5 ಕೆಜಿ ಅಕ್ಕಿಕಡಿತ ಮಾಡುವುದಾಗಿ ಸರ್ಕಾರ ಹೇಳಿರುವ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೇವಾಲ, ಧರಿದ್ರ ಸರ್ಕಾರ. ಅಧಿಕಾರ ಬಿಟ್ಟು ತೊಲಗಲಿ . ಅನ್ನಭಾಗ್ಯ ಯೋಜನೆಯಿಂದ ಬಡವರು ಕೂಲಿ ಕಾರ್ಮಿಕರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಬಡವರು ನೆಮ್ಮದಿಯಿಂದ ಮೂರು ಹೊತ್ತು ಊಟ ಮಾಡುತ್ತಿದ್ದರು.ಪಡಿತರ ಅಕ್ಕಿ ಕಡಿತ ವಿಚಾರ ranadeep

ಇವರಿಗೆ ಬಡವರ ಹಿತ ಕಾಯುವ ಯೋಗ್ಯತೆ ಇಲ್ಲದಿದ್ದರೆ  ಅಧಿಕಾರ ಬಿಟ್ಟುತೊಲಗಲಿ. ಬಡವರ ರಕ್ತ ಹೀರುವ ಕೆಲಸ ಮಾಡಬೇಡಿ  ಎಂದು ರಣದೀಪ್ ಸಿಂಗ್ ಸುರ್ಜೇವಾಲ ಕಿಡಿ ಕಾರಿದರು.

Key words: Ration –rice- reduction-issue-government  – Randeep Singh Surjewala- outrage.