Sunday, September 27, 2026

BDA Apartments

Home Front Page ಕುಡಿದು, ಗಾಂಜಾ ಸೇವಿಸಿ ಮಾತಾಡುತ್ತಾರೆ ಎಂಬ ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಶಾಸಕ ಸಿ.ಟಿ ರವಿ ತಿರುಗೇಟು.

ಕುಡಿದು, ಗಾಂಜಾ ಸೇವಿಸಿ ಮಾತಾಡುತ್ತಾರೆ ಎಂಬ ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಶಾಸಕ ಸಿ.ಟಿ ರವಿ ತಿರುಗೇಟು.

ಬೆಂಗಳೂರು,ಜನವರಿ,2,2023(www.justkannada.in): ರವಿ ಕುಡಿದು, ಗಾಂಜಾ ಸೇವಿಸಿ ಮಾತನಾಡುತ್ತಾರೆ ಎಂಬ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಸಿ.ಟಿ ರವಿ,  ವೈಚಾರಿಕವಾಗಿ ನನ್ನನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ನಾಯಕರನ್ನು ನೋಡಿ ಈ ಮಾತು ಹೇಳುತ್ತಿದ್ದಾರೆ. ನಾನು ಬಿಜೆಪಿಯ ಸಿ.ಟಿ. ರವಿಯೇ ಹೊರತು, ಪಪ್ಪು ಅಲ್ಲ. ಹರಿಪ್ರಸಾದ್ ಏನು ಹೇಳಿದ್ರೋ ಅದೆಲ್ಲಾ ನಿಮ್ಮ ನಾಯಕನಿಗೆ ಅನ್ವಯ ಆಗುತ್ತದೆ. ನನ್ನ ಯೋಗ್ಯತೆ ನೋಡಿ ಚಿಕ್ಕಮಗಳೂರಿನ ಜನರು ಗೆಲ್ಲಿಸಿದ್ದಾರೆ. ಆದರೆ ಇವರ ಯೋಗ್ಯತೆಗೆ ಒಂದು ಗ್ರಾಮ ಪಂಚಾಯತಿ ಚುನಾವಣೆಯನ್ನೂ ಗೆಲ್ಲೋಕೆ ಆಗಲಿಲ್ಲ. 30 ವರ್ಷದಿಂದ ನನ್ನ‌ ದೇಹದ ತೂಕ ಒಂದೇ ಇದೆ. ನನ್ನ ವಿರುದ್ದ ಸುಮ್ಮನೆ ಮಾತಾಡ್ಬೇಡಿ, ಮಾತಾಡಿದ್ರೆ ನಿಮ್ಮೆದೆಲ್ಲಾ ಬಿಚ್ಚಿಡಬೇಕಾಗುತ್ತದೆ ಎಂದು ಹರಿಹಾಯ್ದರು.BL Santosh - selection -candidates - Rajya Sabha-minister-CT Ravi.

ಸಿಎಂ ಕ್ರಿಮಿನಲ್ ​​ಗಳ ರಕ್ಷಣೆಗೆ ನಿಂತಿದ್ದಾರೆ ಎಂಬ ಕಾಂಗ್ರೆಸ್ ಟ್ವೀಟ್ ಗೆ ಟಾಂಗ್ ಕೊಟ್ಟ ಶಾಸಕ ಸಿ.ಟಿ ರವಿ, ಪ್ರದೀಪ್​ ಆತ್ಮಹತ್ಯೆ ಕೇಸ್​​ ನಲ್ಲಿ ಅರವಿಂದ ಲಿಂಬಾವಳಿ  ನೇರ ಪಾತ್ರ ಇದೆ ಅಂತಾ ಹೇಳಿಲ್ಲ. ಸಾರ್ವಜನಿಕರ ಜೀವನದಲ್ಲಿ ಸಹಾಯ ಕೇಳಲು ಸಾಕಷ್ಟು ಜನ ಬರ್ತಾರೆ. ಎಲ್ಲವನ್ನೂ ನಾವು ‌ಸಹಾಯ ಮಾಡೋಕೆ ಆಗುತ್ತಾ..? ದುಡ್ಡು ಕೊಟ್ಟಾಗ ಕಾನೂನು ಮಾರ್ಗದಲ್ಲಿ ರಿಕವರಿ ಮಾಡಿಕೊಳ್ಳಬೇಕು. ಅರವಿಂದ ಲಿಂಬಾವಳಿ ಮೋಸ ಮಾಡಿದ್ದಾರೆ ಅಂತಾ ಎಲ್ಲೂ ಹೇಳಿಲ್ಲ. ನನಗೆ ಸಹಾಯ ಮಾಡಿಲ್ಲ ಅಂತ ಹೇಳಿದ್ದಾರೆ. ಆತ್ಮಹತ್ಯೆ ದಾರಿ‌ ಹಿಡಿದಿದ್ದು ದುರ್ದೈವದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

Key words: MLA -CT Ravi – BK Hariprasad- statement – drunk – ganja.