Tuesday, August 11, 2026

BDA Apartments

Home Cinema ಯೋಗರಾಜ ಭಟ್ಟರ ‘ಗಾಳಿಪಟ’ ಹಾರಿಸಲಿದ್ದಾರಾ ಪ್ರಭುದೇವ?

ಯೋಗರಾಜ ಭಟ್ಟರ ‘ಗಾಳಿಪಟ’ ಹಾರಿಸಲಿದ್ದಾರಾ ಪ್ರಭುದೇವ?

ಬೆಂಗಳೂರು, ಆಗಸ್ಟ್ 21, 2019 (www.justkannada.in): ಯೋಗರಾಜ್ ಭಟ್ಟ ಅವರ ಬಹು ನಿರೀಕ್ಷಿತ ಗಾಳಿಪಟ-2 ನಲ್ಲಿ ಗಣೇಶ್ ಮತ್ತು ದಿಗಂತ್ ಜೊತೆಗೆ ನಟ ಹಾಗೂ ಡ್ಯಾನ್ಸರ್ ಪ್ರಭುದೇವ ಕೂಡ ಅಭಿನಯಿಸಲಿದ್ದಾರೆ?

ಇಂತಹದೊಂದು ಪ್ರಶ್ನೆ ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿದೆ. ಪ್ರಭುದೇವ ಜೊತೆ ಮುಂಬಯಿಯಲ್ಲಿ ನಿರ್ಮಾಪಕ ಮಹೇಶ್ ದಾನಣ್ಣನವರ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಭುದೇವ ಸದ್ಯಕ್ಕೆ ಸಲ್ಮಾನ್ ಖಾನ್ ನಟನೆಯ ದಬಾಂಗ್ 3 ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ನಟ ಸುದೀಪ್ ಕೂಡ ಅಭಿನಯಿಸುತ್ತಿದ್ದಾರೆ.