Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ನೀಡಬೇಕು-ಸಿಎಂ ಭೇಟಿ ಬಳಿಕ ಸಚಿವ ಆರ್ ಅಶೋಕ್ ಹೇಳಿಕೆ.

ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ನೀಡಬೇಕು-ಸಿಎಂ ಭೇಟಿ ಬಳಿಕ ಸಚಿವ ಆರ್ ಅಶೋಕ್ ಹೇಳಿಕೆ.

ಬೆಂಗಳೂರು,ಡಿಸೆಂಬರ್,23,2022(www.justkannada.in): ಜನಸಂಖ್ಯೆ ಆಧಾರದಲ್ಲಿ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ನೀಡಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಒಕ್ಕಲಿಗ ಶಾಸಕರ ನಿಯೋಗ ಇಂದು ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ  ಬೇಡಿಕೆ ಈಡೇರಿಸಲು ಮನವಿ ಮಾಡಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಆರ್.ಅಶೋಕ್, ಒಕ್ಕಲಿಗ ಸಮುದಾಯದ ಬೇಡಿಕೆ ನ್ಯಾಯಯುತವಾಗಿದೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಬೇಕು.  ಸಮುದಾಯದ ಶ್ರೀಗಳು ಮನವಿ ಸಲ್ಲಿಸಿದ್ದಾರೆ.  ನಾನು ಆ ಮನವಿಯನ್ನ ಸಿಎಂಗೆ ಸಲ್ಲಿದ್ದೇವೆ. ನಮ್ಮ ಬೇಡಿಕೆ ಕೇಂದ್ರಕ್ಕೆ ತಲುಪಿಸುತ್ತೇವೆ. ನಗರ ಪ್ರದೇಶದಲ್ಲಿ ಒಕ್ಕಲಿಗರಿಗೆ ಮೀಸಲಾತಿ ಇಲ್ಲ. ಹೀಗಾಗಿ ನಗರ ಪ್ರದೇಶದ ಒಕ್ಕಲಿಗರಿಗೂ ಮೀಸಲಾತಿ ನೀಡಬೇಕು. ಸಿಎಂ ಕೂಡ ಭರವಸೆ ನೀಡಿದ್ದಾರೆ. ಸಿಎಂ ಮೇಲೆ ನಮಗೆ ಅಚಲವಾದ ನಂಬಿಕೆ ಇದೆ. ಎಂದರು.

Key words: Okkaliga -community – reservation-Minister -R Ashok- CM Bommai