Thursday, September 17, 2026

BDA Apartments

ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಕೋವಿಡ್ ನೆಪ- ಡಿ.ಕೆ ಶಿವಕುಮಾರ್ ಟೀಕೆ BDA JK_Adv BDA Adv
Home Front Page ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಕೋವಿಡ್ ನೆಪ- ಡಿ.ಕೆ ಶಿವಕುಮಾರ್ ಟೀಕೆ.

ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಕೋವಿಡ್ ನೆಪ- ಡಿ.ಕೆ ಶಿವಕುಮಾರ್ ಟೀಕೆ.

ಬೆಳಗಾವಿ,ಡಿಸೆಂಬರ್,22,2022(www.justkannada.in):  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಕೋವಿಡ್ ನೆಪ ಹೇಳಿ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಜಾರಿಗೆ ತರುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಟೀಕಿಸಿದರು.

ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಮೇಕೆದಾಟು ಯೋಜನೆ ಅನುಷ್ಠಾನವನ್ನು ಆಗ್ರಹಿಸಿ ಪಾದಯಾತ್ರೆ ವೇಳೆಯೂ  ಕೊರೋನಾ ಸೋಂಕಿನ ನೆಪವೊಡ್ಡಿ ಅದನ್ನು ನಿಲ್ಲಿಸುವ ಪ್ರಯತ್ನವನ್ನ ರಾಜ್ಯ ಸರ್ಕಾರ ಮಾಡಿತ್ತು. ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಕೋವಿಡ್ ನೆಪ dks

ಈಗ  ಭಾರತ್ ಜೋಡೋ ಯಾತ್ರೆ ಕಾಣುತ್ತಿರುವ ಅಪಾರ ಯಶಸ್ಸಿಗೆ ಹೆದರಿ ಕೇಂದ್ರ ಸರ್ಕಾರ ಅದನ್ನು ನಿಲ್ಲಿಸಲು ಪುನಃ ಕೋವಿಡ್-19 ಸೋಂಕು ನಿಯಂತ್ರಣ ನಿಯಮಾವಳಿಗಳನ್ನು ಜಾರಿಗೊಳಿಸುತ್ತಿದೆ  ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದರು.

Key words: Covid – stop -Bharat Jodo Yatra- Central Govt- D.K Sivakumar.