Sunday, August 23, 2026

BDA Apartments

Home Front Page ಪಂಚಮಸಾಲಿಗೆ 2ಎ ಮೀಸಲಾತಿ ಘೋಷಿಸದಿದ್ದರೇ ಬಿಜೆಪಿ ನೆಲಕಚ್ಚಲಿದೆ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಪಂಚಮಸಾಲಿಗೆ 2ಎ ಮೀಸಲಾತಿ ಘೋಷಿಸದಿದ್ದರೇ ಬಿಜೆಪಿ ನೆಲಕಚ್ಚಲಿದೆ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಬೆಳಗಾವಿ,ಡಿಸೆಂಬರ್,22,2022(www.justkannada.in):  ಪಂಚಮಸಾಲಿಗೆ 2ಎ ಮೀಸಲಾತಿ ಘೋಷಿಸದಿದ್ದರೇ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವು ನೀಡಿದ ಆಶ್ವಾಸನೆಯಂತೆ 2ಎ ಮಿಸಲಾತಿ ಪ್ರಕಟಿಸದಿದ್ದರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚುವುದರ ಜೊತೆಗೆ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದಿದ್ದಾರೆ.

2ಎ ಮೀಸಲಾತಿಯನ್ನ ಸಿಎಂ ಬೊಮ್ಮಾಯಿ ಸಾಕು ತಂದೆಯ ಮಾತು ಕೇಳಿ ಮೀಸಲಾತಿ ಘೋಷಿಸಿಲ್ಲ ಎಂದು ಬಿಎಸ್  ಯಡಿಯೂರಪ್ಪ ವಿರುದ್ಧ ಪರೋಕ್ಷ ವಾಗ್ದಾಳಿ  ಬಸನಗೌಡ ಪಾಟೀಲ್ ಯತ್ನಾಳ್, ಸರ್ಕಾರ ಪಂಚಮಸಾಲಿ ಸಮುದಾಯಯಕ್ಕೆ 2ಎ ಮೀಸಲಾತಿ ಘೋಷಿಸದಿದ್ದರೆ ಮುಂದಿನ ನಡೆಯ ಬಗ್ಗೆ ಸಾಯಂಕಾಲ ತಿಳಿಸಲಾಗುವುದು ಎಂದರು.

Key words: 2A reservation – Panchmasal-BJP – MLA -Basan Gowda Patil Yatnal.