Friday, October 23, 2026

Dasara Wishes

ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರದ ಬಗ್ಗೆ ಮೊದಲೇ ಹೇಳಿದ್ದೆ- ಮಾಜಿ ಸಿಎಂ ಹೆಚ...
Happy Dasara
Home Crime ಕಾರಿನಲ್ಲೇ  ಸಾಫ್ಟ್​ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣು.

ಕಾರಿನಲ್ಲೇ  ಸಾಫ್ಟ್​ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣು.

ಬೆಂಗಳೂರು,ಡಿಸೆಂಬರ್,21,2022(www.justkannada.in): ಕಾರಿನಲ್ಲೇ ಸಾಫ್ಟ್​ವೇರ್ ಇಂಜಿನಿಯರ್  ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 ಕುರಬರಹಳ್ಳಿ ಜಂಕ್ಷನ್ ಬಳಿ ಈ ಘಟನೆ ನಡೆದಿದ್ದು, ವಿಜಯ್​ಕುಮಾರ್(51)  ಮೃತಪಟ್ಟ ಇಂಜಿನೀಯರ್ ಎಂದು ಗುರುತಿಸಲಾಗಿದೆ.  ವಿಜಯ್ ಕುಮಾರ್ ಅವರು ಮಹಾಲಕ್ಷ್ಮೀ ಲೇಔಟ್ ನ ನಿವಾಸಿಯಾಗಿದ್ದು, ಕೆಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು  ಎನ್ನಲಾಗಿದೆ.ಕಾರಿನಲ್ಲೇ ಸಾಫ್ಟ್​ವೇರ್ ಇಂಜಿನಿಯರ್ ಆತ್ಮಹತ್ಯೆಗೆ ಶರಣು death death 1

ಅನಾರೋಗ್ಯದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಮನೆಯಲ್ಲಿ ಪತ್ನಿ ಜತೆ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ವಿಷಯವನ್ನು ಪ್ರಸ್ತಾಪಿಸಿದ್ದರು ಎನ್ನಲಾಗಿದೆ.

Key words: Software -engineer –commits- suicide – car.