Monday, September 14, 2026

BDA Apartments

ಕಾಂಗ್ರೆಸ್ ಗೆ ಭವಿಷ್ಯವಿದೆ ಎಂಬ ಭೀತಿಯಿಂದ ಸರ್ಕಾರಿ ಸಂಸ್ಥೆಗಳ ದುರ್ಬಳಕೆ- ಕ...
Home Front Page ಕಾಂಗ್ರೆಸ್ ಗೆ ಭವಿಷ್ಯವಿದೆ ಎಂಬ ಭೀತಿಯಿಂದ ಸರ್ಕಾರಿ ಸಂಸ್ಥೆಗಳ ದುರ್ಬಳಕೆ- ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್...

ಕಾಂಗ್ರೆಸ್ ಗೆ ಭವಿಷ್ಯವಿದೆ ಎಂಬ ಭೀತಿಯಿಂದ ಸರ್ಕಾರಿ ಸಂಸ್ಥೆಗಳ ದುರ್ಬಳಕೆ- ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಿಡಿ.

ಬೆಳಗಾವಿ,ಡಿಸೆಂಬರ್,20,2022(www.justkannada.in):  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ಖಂಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕಾಂಗ್ರೆಸ್ ಗೆ ಭವಿಷ್ಯವಿದೆ ಎಂಬ ಭೀತಿಯಿಂದ ಬಿಜೆಪಿಯು ಸರ್ಕಾರಿ ಸಂಸ್ಥೆಗಳನ್ನ  ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸರ್ಕಾರ ಸಿಬಿಐ,ಇಡಿ, ಐಟಿಯನ್ನ ದುರುಪಯೋಗ ಮಾಡಿಕೊಳ್ಳುತ್ತಿದೆ.  ಕಾಂಗ್ರೆಸ್ ಗೆ ಭವಿಷ್ಯವಿದೆ ಅನ್ನೋ ಕಾರಣಕ್ಕೆ ಡಿ.ಕೆ ಶಿವಕುಮಾರ್ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ಕೇವಲ 60 ಸ್ಥಾನಕ್ಕೆ ಇಳಿಯುವ ಮಾಹಿತಿ ಸಿಕ್ಕಿದೆ. ಹೀಗಾಗಿ ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡುತ್ತಿದೆ. ಆದರೆ ಡಿ.ಕೆ ಶಿವಕುಮಾರ್ ಗೆ ಇದನ್ನೆಲ್ಲಾ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದು ಹೇಳಿದರು.ಕಾಂಗ್ರೆಸ್ ಗೆ ಭವಿಷ್ಯವಿದೆ ಎಂಬ ಭೀತಿಯಿಂದ ಸರ್ಕಾರಿ ಸಂಸ್ಥೆಗಳ ದುರ್ಬಳಕೆ saleem

Key words: Misuse –BJP- government- institutions – fear -Congress – Salim Ahmed