Monday, September 14, 2026

BDA Apartments

Home Front Page ದೇಶಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ವಿದಾಯ ಹೇಳಿ ಪುದುಚೇರಿ ತಂಡ ಸೇರಲಿರುವ ವಿನಯ್ ಕುಮಾರ್

ದೇಶಿ ಕ್ರಿಕೆಟ್: ಕರ್ನಾಟಕ ತಂಡಕ್ಕೆ ವಿದಾಯ ಹೇಳಿ ಪುದುಚೇರಿ ತಂಡ ಸೇರಲಿರುವ ವಿನಯ್ ಕುಮಾರ್

ಬೆಂಗಳೂರು, ಆಗಸ್ಟ್20, 2019 (www.justkannada.in): ಈ ಬಾರಿ ದೇಶಿ ಋತುವಿನಲ್ಲಿ ಆರ್. ವಿನಯಕುಮಾರ್ ಕರ್ನಾಟಕ ತಂಡದಲ್ಲಿ ಆಡುವುದಿಲ್ಲ.

ಸ್ವತಃ ವಿನಯ್ ಕುಮಾರ್ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದು, ಈ ಬಾರಿ ಪುದುಚೇರಿ ತಂಡ ಸೇರಲಿರುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದಾಗ ನನಗೆ 21 ವರ್ಷ ವಯಸ್ಸಾಗಿತ್ತು. ಆಗ ವೆಂಕಟೇಶಪ್ರಸಾದ್ ನಿವೃತ್ತರಾಗಿದ್ದರು. ಅವರ ಸ್ಥಾನ ನನಗೆ ಲಭಿಸಿತ್ತು.

ಇದೀಗ ನಾನು ಒಂದೂವರೆ ದಶಕಗಳ ಕಾಲ ಆಡಿದ್ದೇನೆ. ಪ್ರತಿಭಾನ್ವಿತ ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಅವಕಾಶ ಬಿಟ್ಟುಕೊಡುವುದು ನನ್ನ ಉದ್ದೇಶ. ಅದಕ್ಕಾಗಿ ಪುದುಚೇರಿ ತಂಡವನ್ನು ಆಟಗಾರ ಮತ್ತು ಮಾರ್ಗದರ್ಶಕನಾಗಿ ಸೇರಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.