ಕರ್ನಾಟಕಕ್ಕೆ ಸೇರುತ್ತೇವೆಂದು ಹೇಳಿದ್ದ ಗ್ರಾಮಸ್ಥರ ಮನವೊಲಿಕೆಗೆ ಮುಂದಾದ ಮಹಾರಾಷ್ಟ್ರ ಸರ್ಕಾರ

ಸಾಂಗ್ಲಿ,ಡಿಸೆಂಬರ್,5,2022(www.justkannada.in): ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಾಕಷ್ಟು ಚರ್ಚೆಯಾಗಿದ್ದು ಈ ಮಧ್ಯೆ  ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಕನ್ನಡಿಗರು ಕರ್ನಾಟಕಕ್ಕೆ ಸೇರುತ್ತೇವೆ ಎಂದು ಇಂಗಿತ ವ್ಯಕ್ತಪಡಿಸಿದ್ದರು. ನಮಗೆನೀರುಕೊಡಿಇಲ್ಲವಾದರೇಕರ್ನಾಟಕಕ್ಕೆ ಸೇರಿಕೊಳ್ಳುತ್ತೇವೆ ಎಂದು ಸಾಂಗ್ಲಿ ಜಿಲ್ಲೆಯಜತ್ ತಾಲ್ಲೂಕಿನ ಹಲವು ಗ್ರಾಮದ​ ಜನರು ಎಚ್ಚರಿಕೆ ನೀಡಿದ್ದರು.

ಈ ವಿಚಾರ ಸಂಬಂಧ ಇದೀಗ ಜತ್ ತಾಲ್ಲೂಕಿನ ಜನರ ಮನವೊಲಿಕೆಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು ಇಂದು  ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ ತಿಕ್ಕುಂಡಿ ಗ್ರಾಮಕ್ಕೆ ಮಹಾರಾಷ್ಟ್ರ ಸಚಿವ ಉದಯ್ ಸಾಮಂತ್ ಭೇಟಿ ನೀಡಿ ಗ್ರಾಮಸ್ಥರ  ಸಮಸ್ಯೆ ಆಲಿಸಿದ್ದಾರೆ.

ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಮಹಾರಾಷ್ಟ್ರ ಸಚಿವ ಸಾಮಂತ್  ಮತ್ತು ಅಧಿಕಾರಿಗಳು, ಗ್ರಾಮದ ಹಿರಿಯರು, ಕನ್ನಡ ಪರ ಸಂಘಟನೆಗಳ ಮುಖಂಡರು, ಯುವಕರೊಂದಿಗೆ ಚರ್ಚೆ ನಡೆಸಿ ಗ್ರಾಮದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

 ತಿಕ್ಕುಂಡಿ ಗ್ರಾಮದ ದ್ವಾರ ಬಾಗಿಲು ಮೇಲೆ ಕನ್ನಡದ ಬಾವುಟ ಹಾರಿಸಿದ್ದರು. ಅಲ್ಲದೇ ಗ್ರಾಮಸ್ಥರು ಸಿಎಂ ಬೊಮ್ಮಾಯಿ ಭಾವಚಿತ್ರದ ಬ್ಯಾನರ್ ಹಾಕಿ ಸ್ವಾಗತ ಕೋರಿದ್ದರು.

ನಮಗೆ ನೀರು ಕೊಡಿ ಇಲ್ಲವಾದರೇ ಕರ್ನಾಟಕಕ್ಕೆ ಹೋಗುತ್ತೇವೆ ಎಂದ ಜತ್ ತಾಲ್ಲೂಕು​ ಜನರು ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

Key words: Maharashtra -came – persuade – villagers – join -Karnataka