Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಚಿತ್ರದುರ್ಗದ ಮುರುಘಾ ಶ್ರೀ ಪ್ರಕರಣ: ದಯಾ ಮರಣ ನೀಡುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತ...

ಚಿತ್ರದುರ್ಗದ ಮುರುಘಾ ಶ್ರೀ ಪ್ರಕರಣ: ದಯಾ ಮರಣ ನೀಡುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತ ಬಾಲಕಿಯ ತಾಯಿ.

ಚಿತ್ರದುರ್ಗ,ಡಿಸೆಂಬರ್,5,2022(www.justkannada.in): ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಪೋಕ್ಸೋ  ಪ್ರಕರಣ ಸಂಬಂಧ, ದಯಾಮರಣ ಕೋರಿ ರಾಷ್ಟ್ರಪತಿಗೆ  ಸಂತ್ರಸ್ತ ಬಾಲಕಿಯ ತಾಯಿ ಪತ್ರ ಬರೆದಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಸಂತ್ರಸ್ತ ಬಾಲಕಿಯ ತಾಯಿ, ‘ನನಗೆ ಹಾಗೂ ನನ್ನ ಮಕ್ಕಳಿಗೆ ದಯಾ ಮರಣ ನೀಡಿ. ನನ್ನ ಹಾಗೂ ಮಕ್ಕಳ ಜೀವನದ ಘನತೆ ಉಳಿಸುವಂತೆ ಪತ್ರದಲ್ಲಿ ಕೋರಿದ್ದಾರೆ.ಚಿತ್ರದುರ್ಗದ ಮುರುಘಾ ಶ್ರೀ ಪ್ರಕರಣ: ದಯಾ ಮರಣ ನೀಡುವಂತೆ ಕೋರಿ ರಾಷ್ಟ್ರಪತಿಗ...

ಪ್ರಧಾನಿಯವರ ‘ಭೇಟಿ ಬಚಾವೋ, ಭೇಟಿ ಪಡಾವೋ’ ಎಲ್ಲಿ ಹೋಯ್ತು. 20 ದಿನಗಳ ಕಾಲ ನಾನು ನರಕ ನೋಡಿದ್ದೇನೆ. ನನಗೆ ಈ ನರಕದಿಂದ ಮುಕ್ತಿಕೊಡಿ. ಒಡಲ ಉರಿಯಿಂದ ಈ ಕಣ್ಣೀರ ಪತ್ರ ಬರೆಯುತ್ತಿರುವೆ. ನಮ್ಮಂತಹವರು ನ್ಯಾಯ ಕೇಳಲು ಹೊರಗೆ ಬರಬಾರದು ಎಂದು ತೀವ್ರ ಮನನೊಂದು ಸಂತ್ರಸ್ತ ಬಾಲಕಿಯ ತಾಯಿ ಅಳಲು ತೋಡಿಕೊಂಡಿದ್ದಾರೆ.

Key words: Muruga Shri- Case -victim -girl’s -mother –letter- President