Tuesday, September 22, 2026

BDA Apartments

ಸುಳ್ಳೇ ಬಿಜೆಪಿ ನಾಯಕರ ಮನೆ ದೇವರು: ಸಂಸದ ಡಿ.ಕೆ.ಸುರೇಶ್ ಟೀಕಾಪ್ರಹಾರ BDA JK_Adv BDA Adv
Home Front Page ಸುಳ್ಳೇ ಬಿಜೆಪಿ ನಾಯಕರ ಮನೆ ದೇವರು: ಸಂಸದ ಡಿ.ಕೆ.ಸುರೇಶ್ ಟೀಕಾಪ್ರಹಾರ

ಸುಳ್ಳೇ ಬಿಜೆಪಿ ನಾಯಕರ ಮನೆ ದೇವರು: ಸಂಸದ ಡಿ.ಕೆ.ಸುರೇಶ್ ಟೀಕಾಪ್ರಹಾರ

ಬೆಂಗಳೂರು, ಡಿಸೆಂಬರ್ 04, 2022 (www.justkannada.in): ಬಿಜೆಪಿಯ ರಾಷ್ಟ್ರೀಯ ನಾಯಕರು ಸುಳ್ಳನ್ನು ಮನೆ ದೇವರು ಮಾಡಿಕೊಂಡಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಟೀಕಾಪ್ರಹಾರ ಮಾಡಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಹೇಳುವುದು ಒಂದಾದರೆ, ಮಾಡುವುದು ಇನ್ನೂಂದು. ಬಿಜೆಪಿಗೆ ಮುಂದೆ ಒಂದು ರೀತಿಯ ಮುಖ, ಹಿಂದೆ ಮತ್ತೊಂದು ರೀತಿಯ ಮುಖ ಇದೆ ಎಂದು ದೂರಿದ್ದಾರೆ.

ಬಿಜೆಪಿಗೆ ರೌಡಿ ಶೀಟರ್‌ಗಳ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರಕ್ಕಾಗಿ ಬಿಜೆಪಿಯವರು ಸುಳ್ಳು ಹೇಳಿ, ಸತ್ಯವನ್ನು ಮಾಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕರಿಂದ ಕೆಳ ಹಂತದ ನಾಯಕರವರೆಗೂ ಎಲ್ಲರು ಸುಳ್ಳನ್ನು ಮನೆ ದೇವರು ಮಾಡಿಕೊಂಡಿದ್ದಾರೆ. ಇವತ್ತು ಅಧಿಕಾರಕ್ಕಾಗಿ ಸಂಸ್ಕೃತಿಯ ಹೆಸರಿನಲ್ಲಿ ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ ಕಿಡಿಕಾರಿದ್ದಾರೆ.