Tuesday, August 11, 2026

BDA Apartments

Home Front Page ಮೈಸೂರು ವಿವಿಯಿಂದ ಜಿ.ಕೆ.ಗೌತಮ್’ಗೆ ಪಿಎಚ್.ಡಿ ಪದವಿ

ಮೈಸೂರು ವಿವಿಯಿಂದ ಜಿ.ಕೆ.ಗೌತಮ್’ಗೆ ಪಿಎಚ್.ಡಿ ಪದವಿ

ಮೈಸೂರು,ಡಿಸೆಂಬರ್,2,2022(www.justkannada.in):  ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿದ ಜಿ.ಕೆ.ಗೌತಮ್ ಅವರ ಮಹಾಪ್ರಬಂಧ ಪಿಎಚ್‌ಡಿಗೆ ಅಂಗೀಕಾರವಾಗಿದೆ.

ಡಾ.ಎಚ್.ಸೋಮಶೇಖರ್ ಅವರ ಮಾರ್ಗದರ್ಶನದಲ್ಲಿ ‘‘ಸ್ಟಡೀಸ್ ಆನ್ ನಾನ್‌ಲೈನರ್ ಆಪ್ಟಿಕಲಿ ಆ್ಯಕ್ಟೀವ್ ಪಾಲಿಮರ್ ಕಾಂಪೋಸೈಟ್’ ವಿಷಯ ಕುರಿತು ಸಂಶೋಧನೆ ನಡೆಸಿ ಮಂಡಿಸಿದ ಮಹಾಪ್ರಬಂಧವನ್ನು ಮೈವಿವಿ ಪಿಎಚ್‌ಡಿ ಪದವಿಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿ.ಕೆ.ಗೌತಮ್ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.