Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಸಂಚಾರ ನಿಯಮ ಉಲ್ಲಂಘನೆ ಪ್ರಕರಣ: ಮೈಸೂರು ನಗರದಲ್ಲಿ ಒಂದೇ ದಿನ 3.43 ಲಕ್ಷ ರೂ. ದಂಡ...

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ: ಮೈಸೂರು ನಗರದಲ್ಲಿ ಒಂದೇ ದಿನ 3.43 ಲಕ್ಷ ರೂ. ದಂಡ ವಸೂಲಿ.

ಮೈಸೂರು,ಡಿಸೆಂಬರ್,2,2022(www.justkannada.in): ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ  ಮೈಸೂರು ನಗರದಲ್ಲಿ ಒಂದೇ ದಿನದಲ್ಲಿ 3.43,000 ರೂ ದಂಡ ವಸೂಲಿ ಮಾಡಲಾಗಿದೆ.

ನಗರದಲ್ಲಿ ಸಂಚಾರ ನಿಯಮಗಳ ಕಟ್ಟು ನಿಟ್ಟಾದ ಜಾರಿ ಸಂಬಂಧ ಕಳೆದ ಮೂರು ದಿನಗಳಿಂದ ನಗರ ಪೋಲಿಸ್ ಆಯುಕ್ತರ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿದೆ.  ಸಂಚಾರಿ, ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಂದ  ಜಂಟಿ ತಪಾಸಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಮೂರನೇ ದಿನ 3.43,000 ರೂ ದಂಡ ವಸೂಲಿ ಮಾಡಿರುವ ಬಗ್ಗೆ ವರದಿಯಾಗಿದೆ.ಸಂಚಾರ ನಿಯಮ ಉಲ್ಲಂಘನೆ ಪ್ರಕರಣ: ಮೈಸೂರು ನಗರದಲ್ಲಿ ಒಂದೇ ದಿನ 3.43 ಲಕ್ಷ ರೂ. ದಂಡ ...

2647 ವಾಹನಗಳ ತಪಾಸಣೆ ಮಾಡಲಾಗಿದ್ದು, 695 ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ 41 ವಾಹನಗಳ ಜಪ್ತಿ ಮಾಡಲಾಗಿದೆ.  ನಿನ್ನೆ ಕೂಡ 3.22,200 ರೂ ದಂಡ ವಸೂಲಿ ಮಾಡಲಾಗಿತ್ತು. ಮಂಟಿ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ತಪಾಸಣೆ ಸೇರಿದಂತೆ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ  ನಡೆಸಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಡಿ.ಸಿ.ಪಿ. ಕಾನೂನು ಮತ್ತು ಸುವ್ಯವಸ್ಥೆ, ಡಿ.ಸಿ.ಪಿ. ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ಹಾಗೂ ವಿಭಾಗದ ಎಲ್ಲಾ ಎ.ಸಿ.ಪಿ.ರವರು, ನಗರದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‍ ಪೆಕ್ಟರ್ ಹಾಗೂ ಸಿಬ್ಬಂದಿಗಳು  ಭಾಗವಹಿಸಿದ್ದರು.

Key words: Traffic –violation- case-3.43 lakh – Collection – fines – Mysore city