ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರನ್ನ ಸಿಎಂ ಮಾಡಲು ನಾವು ಸಿದ್ಧ-ಮಾಜಿ ಸಿಎಂ ಹೆಚ್.ಡಿಕೆ.

ತುಮಕೂರು,ಡಿಸೆಂಬರ್,2,2022(www.justkannada.in): ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರನ್ನ ಸಿಎಂ ಮಾಡಲು ನಾವು  ತಯಾರಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ತುಮಕೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಜೆಡಿಎಸ್ ಗೆ 123 ಸ್ಥಾನ ಬಂದರೆ ದಲಿತ ಸಿಎಂ ಯಾಕೆ ಆಗಬಾರದು..? ದಲಿತರನ್ನ ಸಿಎಂ ಮಾಡಲು ನಾವು ತಯಾರಿದ್ದೇವೆ ಎಂದರು.

ಅಸ್ಪೃಶ್ಯ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಏನು ಮಾತನಾಡಿದ್ದಾರೆ ಎಂದು ದಾಖಲೆ ನೀಡಲಾ..? ದಲಿತ ಮಹಿಳೆಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲಿರಿಸಿಕೊಂಡಿದ್ದೆ ಯಾವ ಸಿಎಂ ಈ ರೀತಿ ಮಾಡಿದ್ದಾರೆ ಹೇಳಲಿ ಎಂದು ಹೇಳಿದರು.

Key words: JDS -comes -power- Dalit CM-Former CM- H.D.Kumaraswamy