Friday, September 11, 2026

BDA Apartments

O último dia de um condenado : Descubra, Guarde, Compartilhe BDA JK_Adv BDA Adv
Home Front Page ಮಂಗಳೂರು ಆಟೋ ಬಾಂಬ್ ಸ್ಪೋಟ ಸ್ಥಳಕ್ಕೆ ಭೇಟಿ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ, ಪರಿಶೀಲನೆ.

ಮಂಗಳೂರು ಆಟೋ ಬಾಂಬ್ ಸ್ಪೋಟ ಸ್ಥಳಕ್ಕೆ ಭೇಟಿ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ, ಪರಿಶೀಲನೆ.

ಮಂಗಳೂರು,ನವೆಂಬರ್ ,23, 2022(www.justkannada.in): ಮಂಗಳೂರಿನ  ನಾಗುರಿ ಬಳಿ  ಸಂಭವಿಸಿದ್ಧ ಆಟೋದಲ್ಲಿನ ಬಾಂಬ್ ಸ್ಪೋಟದ ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾಂಬ್ ಸ್ಪೋಟದ ಸ್ಥಳಕ್ಕೆ ಭೇಟಿ ನೀಡಿದ  ಗೃಹ ಸಚಿವ ಅರಗ ಜ್ಞಾನೇಂದ್ರ,  ಪೊಲೀಸರಿಂದ ಮಾಹಿತಿ ಪಡೆದರು. ಗೃಹ ಸಚಿವರಿಗೆ ಡಿಜಿಪಿ ಪ್ರವೀಣ್ ಸೂದ್, ಮಂಗಳೂರು ಪೊಲೀಸ್  ಕಮಿಷನರ್ ಶಶಿಕುಮಾರ್, ಅಧಿಕಾರಿಗಳು ಸಾಥ್ ನೀಡಿದರು.

ಹಾಗೆಯೇ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ ಬಾಂಬ್ ಸ್ಪೋಟದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತಮ್ ಆರೋಗ್ಯ ವಿಚಾರಿಸಿದರು. ಗೃಹ ಸಚಿವರಿಗೆ ಗೃಹ ಸಚಿವರಿಗೆ ಡಿಜಿಪಿ ಪ್ರವೀಣ್ ಸೂದ್, ಮಂಗಳೂರು ಪೊಲೀಸ್  ಕಮಿಷನರ್ ಶಶಿಕುಮಾರ್, ಜಿಲ್ಲಾಧಿಕಾರಿಗಳು ಸಾಥ್ ನೀಡಿದರು.

Key words: Home Minister -Araga jnanendra-visits- Mangalore -auto bomb –blast-place.