ಡಿ.7ರಿಂದ CFTRI ಸಂಸ್ಥೆಯಲ್ಲಿ 9 ನೇ ಅಂತರಾಷ್ಟ್ರೀಯ ಆಹಾರ ಸಮ್ಮೇಳನ.

ಮೈಸೂರು,ಡಿಸೆಂಬರ್,5,2023(www.justkannada.in): ಡಿಸೆಂಬರ್ 7 ರಿಂದ 10 ರವರಗೆ ಮೈಸೂರಿನ ಸಿಎಫ್ ಟಿ ಆರ್ ಐ ಸಂಸ್ಥೆಯಲ್ಲಿ  9 ನೇ ಅಂತರಾಷ್ಟ್ರೀಯ ಆಹಾರ ಸಮ್ಮೇಳನ ಆಯೋಜನೆ ಮಾಡಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಎಎಫ್ಎಸ್ಟಿ ಅಧ್ಯಕ್ಷ ಡಾ.ಎನ್ ಭಾಸ್ಕರ್ , 9 ನೇ ಇಫ್ಕಾನ್ 2023  ಸಮಾವೇಶ ಆಯೋಜನೆ ಮಾಡಲಾಗಿದೆ. ಎ ಎಫ್ ಎಸ್ ಟಿ,  ಸಿ ಎಫ್ ಟಿ ಆರ್ ಐ ಮತ್ತು ಡಿಎಫ್ಆರ್ಎಲ್  ಮೈಸೂರು, ಐಐಟಿಆರ್ ಲಕ್ನೋ ಸಂಯುಕ್ತ ಆಶ್ರಯದಲ್ಲಿ ಕೆಎಸ್ಓಯು ನ ಘಟಿಕೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನೆ ಮಾಡಲಾಗಿದೆ. ಡಿಸೆಂಬರ್ 07 ರಂದು ಸಂಜೆ 5 ಗಂಟೆಗೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್  ಅವರಿಂದ ಸಮಾವೇಶ ಉದ್ಘಾಟನೆಯಾಗಲಿದ್ದು, ದೇಶ, ವಿದೇಶಗಳ  ಸಂಶೋಧಕರು, ವಿಜ್ಞಾನಿಗಳು ವಿಚಾರ ಮಂಡನೆ ಮಾಡಲಿದ್ದಾರೆ. ಸಂಶೋಧನೆಗಳನ್ನ ಹೊಸ ಅನ್ವೇಷಣೆಗಳ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಆಹಾರ ಸಂಸ್ಕರಣೆ, ಅನ್ವೇಷಣೆ ಕುರಿತು ಕಾರ್ಯಾಗಾರ ಜರುಗಲಿದ್ದು, ವಿವಿಧ ರಾಜ್ಯಗಳ ಸಂಶೋಧನಾ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಸ್ರೋ ಮುಖ್ಯಸ್ಥ ಡಾ.ಎಸ್ ಸೋಮನಾಥ್ ಭಾಗಿಯಾಗಲಿದ್ದಾರೆ. ಸಿಎಫ್ ಟಿಆರ್ ಐ ಆವರಣದಲ್ಲಿ ಆಹಾರ ಮೇಳದಲ್ಲಿ ಕೊನೆಯ ದಿನ ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತದೆ. ಅಂತರಾಷ್ಟ್ರೀಯ ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಾ.ಎನ್ ಭಾಸ್ಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಎಫ್ ಟಿ ಆರ್ ಐ ಛೇರ್ಮನ್ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಮತ್ತು ಡಾ.ಸುರೇಶ್ ಸಖಾರೆ ಭಾಗಿಯಾಗಿದ್ದರು.

Key words: 9th– International- Food Conference – CFTRI -7th Dec-mysore