ಬಿಟ್ ಕಾಯಿನ್ ಮೂಲಕ ಲಕ್ಷ ಲಕ್ಷ ಹಣ ಸಂಪಾದಿಸಲು ಹೋಗಿ ಬರೋಬ್ಬರಿ 87 ಲಕ್ಷ ರೂ. ಹಣ ಕಳೆದುಕೊಂಡ ಮೈಸೂರಿಗರು..

ಮೈಸೂರು,ಜುಲೈ,20,2023(www.justkannada.in):  ಬಿಟ್ ಕಾಯಿನ್ ಮೂಲಕ ಲಕ್ಷ ಲಕ್ಷ ಹಣ ಸಂಪಾದಿಸಲು ಹೋಗಿ ಮೈಸೂರಿನ ಇಬ್ಬರು ನಿವಾಸಿಗಳು ಬರೊಬ್ಬರಿ 87 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.

ಮಧ್ಯವರ್ತಿಯ ಮಾತಿಗೆ ಮರುಳಾಗಿ  ಮೈಸೂರಿನ ಮೇಟಗಳ್ಳಿ ನಿವಾಸಿ ವಿಜಯಲಕ್ಷ್ಮಿ 52 ಲಕ್ಷ, ಮೊಹಮ್ಮದ್ ಜಾವೇದ್ 35 ಲಕ್ಷ ರೂ. ಹಣ ಕಳೆದಕೊಂಡಿದ್ದಾರೆ. ಒಂದೇ ತಿಂಗಳಿನಲ್ಲಿ ಎರೆಡು ಪ್ರಕರಣಗಳು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.  ಹಣ ಕಳೆದಕೊಂಡ ಇಬ್ಬರು ಸಹ ಬ್ಯಾಂಕ್ ನಲ್ಲಿ ಸಾಲ ಮಾಡಿ ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದರು.

ಬಿಟ್ ಕಾಯಿನ್ ಟ್ರೇಡರ್ಸ್ ಕಾಂಟ್ಯಾಕ್ಟ್ ಕಂಡು ಮೈಸೂರು ಪೊಲೀಸರು ಬೆಚ್ಚಿ ಬಿದಿದ್ದಾರೆ. ಜಮ್ಮು ಕಾಶ್ಮೀರದ ಶ್ರೀನಗರದಿಂದ ಕೇರಳದವರೆಗೆ ಬಿಟ್ ಕಾಯಿನ್ ದಂಧೆ ನೆಟ್ ವರ್ಕ್ ಇದ್ದು, ಹಣ ವರ್ಗಾವಣೆಯಾದ ಕ್ಷಣಾರ್ಧದಲ್ಲಿ ಹಣ ಡ್ರಾ ಮಾಡಿಕೊಳ್ಳುತ್ತಾರೆ ಖದೀಮರು.  ದೇಶದ ವಿವಿಧ ರಾಜ್ಯಗಳಲ್ಲಿ 51 ಅಕೌಂಟ್ಸ್ ಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ.

ಅದೇ ರೀತಿ ಮೈಸೂರಿನ ಮಹಮ್ಮದ್ ಜಾವೇದ್ ಬಳಿ 35 ಲಕ್ಷ ಹಣವನ್ನ‌ 15 ಅಕೌಂಟ್ಸ್ ಖದೀಮರು ಹಾಕಿಸಿಕೊಂಡಿದ್ದಾರೆ. ಜೊತೆಗೆ ವಿಜಯಲಕ್ಷ್ಮೀ ಎಂಬುವವರ 52 ಲಕ್ಷ ಹಣವನ್ನ 36 ಅಕೌಂಟ್ಸ್ ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.  ಶ್ರೀನಗರ‌ದಲ್ಲಿ 2 ಅಕೌಂಟ್, ಕೇರಳ, ಬೆಂಗಳೂರು, ಮಧ್ಯಪ್ರದೇಶ್, ಜಾರ್ಖಂಡ್, ಉತ್ತರಪ್ರದೇಶ ಸೇರಿದಂತೆ ವಿವಿಧ ಭಾಗದಲ್ಲಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.

ಖದೀಮರು ಟೆಲಿಗ್ರಾಂನಲ್ಲಿ ಇನ್ವಿಟೇಷನ್ ಕಳುಹಿಸಿ ಗ್ರೂಪ್ ರಚಿಸಿದ್ದು, ಲಕ್ಷ ಲಕ್ಷ ಲಾಭ ಗಳಿಸಿರುವ ನಕಲಿ ಸ್ಕ್ರೀನ್ ಶಾಟ್ ಕಳುಹಿಸಿ ಜನರಿಗೆ ವಂಚನೆ ಮಾಡಿದ್ದಾರೆ. ಬಿಟ್ ಕಾಯಿನ್,ಕ್ರಿಪ್ಟೋ ಕರೆನ್ಸಿ ಟ್ರೇಡರ್ಸ್ ಅಂಥ ಪರಿಚಯಿಸಿಕೊಂಡು ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿಯಲ್ಲಿ ಇನ್ವೆಸ್ಟ್ ಮಾಡಿ ಲಕ್ಷ ಲಕ್ಷ ಲಾಭಗಳಿಸಿ ಎಂದು ಸುಳ್ಳು ಭರವಸೆ ನೀಡುತ್ತಾರೆ. ಒಂದು ಭಾರಿಯೂ ಮೊಬೈಲ್ ಮೂಲಕ ಮಾತನಾಡದೆ ಎಲ್ಲವನ್ನು ಟೆಲಿಗ್ರಾಂನಲ್ಲೇ ಚಾಟ್ ಮಾಡಿ ಬುದ್ಧಿವಂತಿಕೆ ಪ್ರದರ್ಶಿಸಿ ಎಲ್ಲಿಯೂ ಸಂದೇಹ ಬರದಂತೆ ಗ್ರಾಹಕರಿಗೆ ನಕಲಿ ಟ್ರೇಡರ್ಸ್ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ನಲ್ಲಿ ಹಣ ಹೂಡುವ ಮುನ್ನ ಎಚ್ಚರಿಕೆ ವಹಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಕರೆ ನೀಡಿದ್ದಾರೆ.

-V.Mahesh kumar

Key words: 87 lakhs – lost- earn- money – Bitcoin-  Mysore