ದಾಖಲೆ ಇಲ್ಲದೆ ಸಾಗಿಸುತ್ತಿದ್ದ 82 ಲಕ್ಷ ರೂ ಹಣ ಜಪ್ತಿ ಮಾಡಿದ ಪೊಲೀಸರು.

ಹುಬ್ಬಳ್ಳಿ,ಆಗಸ್ಟ್,28,2021(www.justkannada.in):  ದಾಖಲೆ ಇಲ್ಲದೆ ಸಾಗಿಸುತ್ತಿದ್ದ 82 ಲಕ್ಷ ರೂ ಹಣವನ್ನ ಜಪ್ತಿ ಮಾಡಿ ವ್ಯಕ್ತಿಯನ್ನ  ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಕೇಶ್ವಾಪುರ ಚೆಕ್ ಪೋಸ್ಟ್ ನಲ್ಲಿ ಹಣ ಜಪ್ತಿ ಮಾಡಲಾಗಿದೆ. ವಿಜಯಪುರದಿಂದ ಹುಬ್ಬಳ್ಳಿಗೆ ದಾಖಲೆ ಇಲ್ಲದೆ 82 ಲಕ್ಷ ರೂ ಹಣವನ್ನ ವ್ಯಕ್ತಿಯೊಬ್ಬರು ಸಾಗಿಸುತ್ತಿದ್ದರು. ಈ ಮಧ್ಯೆ ಕೇಶ್ವಾಪುರ ಚೆಕ್ ಪೋಸ್ಟ್ ನಲ್ಲಿ ಪೊಲೀಸರ ತಪಾಸಣೆ ವೇಳೆ ಈ ಹಣವನ್ನ ಜಪ್ತಿ ಮಾಡಲಾಗಿದೆ.ganja peddlers arrested by mysore police

ಸೆಪ್ಟಂಬರ್ 3 ರಂದು ಹುಬ್ಬಳ್ಳಿ- ಧಾರವಾಡ ನಗರ ಪಾಲಿಕೆ ಚುನಾವಣೆ ಹಿನ್ನೆಲೆ ಹಣವನ್ನ ಚುನಾವಣಾ ಅಕ್ರಮಕ್ಕೆ ತಂದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Key words: 82 lakhs –sieze- police-hubbli