Monday, August 3, 2026

BDA Apartments

Home Front Page 8 ರಿಂದ 10 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ- ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ…

8 ರಿಂದ 10 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ- ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ…

ಬೆಂಗಳೂರು,ಜ,6,2020(www.justkannada.in):  8 ರಿಂದ 10 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಮಿತ್ ಶಾ ಜನವರಿ 16ರಿಂದ18ರೊಳಗೆ ಬೆಂಗಳೂರಿಗೆ ಬರಲಿದ್ದಾರೆ. ಅವರು ರಾಜ್ಯಕ್ಕೆ ಬರುವ ಮೊದಲೇ ನಾನು ದೆಹಲಿಗೆ ಹೋಗ್ತೇನೆ. ಮಾತುಕತೆ ನಂತ್ರ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಮಾಡ್ತೇವೆ  ಎಂದು ತಿಳಿಸಿದರು.

ಎಂಟರಿಂದ ಹತ್ತು ದಿನಗಳ ಒಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವ ಆಲೋಚನೆಯಲ್ಲಿದ್ದೇವೆ.  ವಿದೇಶಕ್ಕೆ ಹೋಗುವ ಮುನ್ನ  ಸಚಿವ ಸಂಪುಟ ವಿಸ್ತರಣೆ ಮಾಡುವ ಆಸೆ ಇದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Key words: 8 to 10 days –cabinet- expansion-CM BS Yeddyurappa.