ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಹೋರಾಟ: 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ- ಪ್ರಧಾನಿ ನರೇಂದ್ರ ಮೋದಿ  

ನವದೆಹಲಿ,ಆಗಸ್ಟ್,15,2023(www.justkannada.in): ಮುಂದಿನ 50 ವರ್ಷ ಒಂದೇ ಮಂತ್ರದೊಂದಿಗೆ ಸಾಗುವುದು ಅಗತ್ಯವಿದೆ. ದೇಶದ ಎಲ್ಲ ಜನರು “ಭಾರತದ ಏಕತೆ” ಮಂತ್ರ ಜಪಿಸುತ್ತಾ ಹಜ್ಜೆ ಹಾಕಬೇಕಿದೆ. ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

77ನೇ ಸ್ವಾತಂತ್ರ್ಯ ದಿನಾಚಾರಣೆ ಅಂಗವಾಗಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಿಷ್ಟು..

ದೇಶದ ಜನರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಸತ್ಯಾಗ್ರಹ ಚಳುವಳಿ. ಭಗತ್​ಸಿಂಗ್​, ಸುಖದೇವ ಅವರ ತ್ಯಾಗ, ತಪಸ್ಸು, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ಅವರಿಗೆ ನಮ್ಮ ನಮನ.ಭಾರತದ ವೀರರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದರು. ದೇಶದ ನಾರಿ, ಯುವ, ರೈತ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹವಣಿಸುತ್ತಿದ್ದರು. ಅನೇಕ ಮಹಾಪುರಷರು ದೇಶದ ಸ್ವಾತಂತ್ರ್ಯಕ್ಕಾಗಿ, ಗುಲಾಮದಿಂದ ಹೊರಬಹರುಲು ಶ್ರಮಿಸಿದರು ಎಂದು ಪ್ರಧಾನಿ ಮೋದಿ  ಸ್ಮರಿಸಿದರು.

ದೇಶದ ಮುಂದೆ ಮತ್ತೊಂದು ಅವಕಾಶ ಬಂದಿದೆ. ಅಮೃತಕಾಲದಲ್ಲಿ ನಾವು ಇದ್ದೇವೆ. ಅಮೃತಕಾಲದ ಮೊದಲ ವರ್ಷದಲ್ಲಿದ್ದೇವೆ. ಈ ಸಮಯದಲ್ಲಿ ಸರ್ವಜನ ಹಿತಾಯ ಸರ್ವಜನ ಸುಖಾಯಗಾಗಿ ನಾವು ಮುಂದೆ ಬಂದರೇ ಮುಂದಿನ ಪೀಳಿಗೆಗೆ ಬಲಿಷ್ಠ ಭಾರತ ನಿರ್ಮಾಣ ಮಾಡಬಹುದು. ಯುವ ಶಕ್ತಿ ಮೇಲೆ ನನಗೆ ಭರವಸೆ ಇದೆ. ಯುವ ಶಕ್ತಿಯಲ್ಲಿ ಸಾಮರ್ಥ್ಯವಿದೆ. ಜಗತ್ತಿನ ಮೂರು ಸ್ಟಾರ್ಟಪ್ ​​ನಲ್ಲಿ​  ನಮ್ಮ ಯುವಕರು ಇದ್ದಾರೆ. ಭವಿಷ್ಯದ ದಿನಗಳಲ್ಲಿ ಭಾರತದ ಟೆಕ್ನಾಲಜಿಯಲ್ಲಿ ನಂಬರ್​ 1 ಆಗಲಿದೆ. ಜಗತ್ತಿನ ವಿವಿಧ ದೇಶಗಳು ಮಾತನಾಡುತ್ತಿವೆ ಭಾರತ ಜಗತ್ತಿನಲ್ಲಿ ಕಮಾಲ್​ ಮಾಡಿವೆ. ಕಳೆದ ಒಂದು ವರ್ಷದಿಂದ ದೇಶದಲ್ಲಿ ಜಿ20 ಸಂಭ್ರಮಾಚರಣೆ ಮನೆ ಮಾಡಿದೆ. ಈ ಸಭೆಯಿಂದ ದೇಶದ ಗೌರವ ಇನ್ನೂ ಹೆಚ್ಚಿದೆ. ಜಗತ್ತಿನ ವಿವಿಧ ದೇಶಗಳು ಭಾರತಕ್ಕೆ ಗೌರವಿಸುತ್ತಿವೆ. ಕೊರೊನಾ ನಂತರ ದೇಶ ಸಾಕಷ್ಟು ಬದಲಾಗುತ್ತಿದೆ. ಬದಲಾಗುತ್ತಿರುವ ದೇಶ ನಿಮ್ಮ ಸಾಮರ್ಥ್ಯದ ಪ್ರತೀಕವಾಗಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

ಭಾರತದ ವೈವಿಧ್ಯತೆಯನ್ನು ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ. ಮುನ್ನುಗ್ಗುತ್ತಿರುವ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಪ್ರತಿ ಕ್ಷೇತ್ರದಲ್ಲೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ಪ್ರತ್ಯೇಕ ಸಹಕಾರ ಇಲಾಖೆಯನ್ನು ಸ್ಥಾಪಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ದೇಶದ ಗಡಿ ಕಾಯುತ್ತಿರುವ ಸೈನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೇನೆಯಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿವೆ. ಸುರಕ್ಷತೆ, ಶಾಂತಿ ಮತ್ತು ಪ್ರಗತಿಯ ದೇಶವಾಗಿದೆ. ಪರಿವರ್ತನೆಯ ವಾತಾವರಣ ನಿರ್ಮಾಣ ಮಾಡಿದ್ದೇವೆ. ಮುಂದಿನ 50 ವರ್ಷ ಒಂದೇ ಮಂತ್ರದೊಂದಿಗೆ ಸಾಗುವುದು ಅಗತ್ಯವಿದೆ. ದೇಶದ ಎಲ್ಲ ಜನರು “ಭಾರತದ ಏಕತೆ” ಮಂತ್ರ ಜಪಿಸುತ್ತಾ ಹಜ್ಜೆ ಹಾಕಬೇಕಿದೆ. 2047 ರಲ್ಲಿ ಭಾರತದ ನಿರ್ಣಯಕ್ಕೆ ಜಗತ್ತು ತಲೆಬಾಗುತ್ತದೆ ಎಂದು ಪ್ರಧಾನಿ ಮೋದಿಯವರು ಹೇಳಿದರು.

 ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ..

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡಸಿದ ಪ್ರಧಾನಿ ನರೇಂದ್ರ ಮೋದಿ, ಕುಟುಂಬವಾದಿ ರಾಜಕೀಯ ದೇಶದ ಪ್ರತಿಭಾವಂತರ ವೈರಿಗಳು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಅದನ್ನು ನಿರ್ಮೂಲನೆ ಮಾಡಬೇಕು. ಭ್ರಷ್ಟಾಚಾರವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದರು.

ಭಾರತ ಇಂದು ಆಧುನಿಕತೆಯತ್ತ ಹೆಜ್ಜೆ ಇಡುತ್ತಿದೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕಕ್ಕೆ ನಾವು ಸರ್ಕಾರದ ಹೆಚ್ಚು ಆದ್ಯತೆ ನೀಡುತ್ತೇವೆ. ಭಾರತದ ಅಭಿವೃದ್ಧಿಗಾಗಿ ದೇಶದ ಜನರ ಆಶೀರ್ವಾದ ಅಗತ್ಯವಿದೆ. ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ಕುಟುಂಬವಾದಿಗಳು ದೇಶದ ಜನರ ಹಕ್ಕುಗಳನ್ನು ಕಸಿದುಕೊಂಡಿದ್ದರು ಎಂದು ಪ್ರಧಾನಿ ಮೋದಿ ನುಡಿದರು.

Key words: 77th Independence Day-Struggle – corruption-free –India-developed- nation – PM Modi