ಶತದಿನದತ್ತ ಹೆಜ್ಜೆ ಹಾಕಿದ ‘777 ಚಾರ್ಲಿ’

ಬೆಂಗಳೂರು, ಆಗಸ್ಟ್ 25, 2022 (www.justkannada.in): ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ನೂರು ದಿನ ಪೂರೈಸುವತ್ತ ಮುನ್ನುಗ್ಗುತ್ತಿದೆ.

ಥಿಯೇಟರ್‌ನಲ್ಲಿ ಸದ್ದು ಮಾಡಿದ್ದ ‘777 ಚಾರ್ಲಿ’ ಯಶಸ್ವಿಯಾಗಿ 75 ದಿನ ಪೂರೈಸಿದ್ದು, ಇದೀಗ 100 ಡೇಸ್‌ ಕಡೆಗೆ ಮುನ್ನುಗ್ಗುತ್ತಿದೆ. ಈ ಮೂಲಕ ಸ್ಯಾಂಡಲ್‌ವುಡ್‌ ಸಿನಿಮಾ ಸಖತ್‌ ಸೌಂಡ್‌ ಮಾಡುತ್ತಿದೆ.

‘ಕೆಜಿಎಫ್‌ ಚಾಪ್ಟರ್ 2’ ನಂತರ ರಿಲೀಸ್‌ ಆಗಿ ಭರ್ಜರಿ ಯಶಸ್ಸು ಸಾಧಿಸಿದ ಈ ಸಿನಿಮಾ ಜಗತ್ತಿನಾದ್ಯಂತ ಮೋಡಿ ಮಾಡಿತ್ತು. ‘777 ಚಾರ್ಲಿ’ ಒಟಿಟಿಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದರೂ ಥಿಯೇಟರ್‌ನಲ್ಲಿ ಹವಾ ಕಡಿಮೆಯಾಗಿಲ್ಲ.

ದೇಶಾದ್ಯಂತ ಹತ್ತಾರು ಥಿಯೇಟರ್‌ನಲ್ಲಿ ಇಂದಿಗೂ ‘777 ಚಾರ್ಲಿ’ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ ಬಾಕ್ಸ್‌ ಆಫೀಸ್‌ ಲೆಕ್ಕದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.