ಮುಂದಿನ 25 ವರ್ಷ ದೇಶಕ್ಕೆ ಮಹತ್ವ ಪೂರ್ಣ:  ಹೊಸ ಗುರಿಯೊಂದಿಗೆ ಮುನ್ನಗ್ಗಬೇಕು- ಪ್ರಧಾನಿ ಮೋದಿ ಕರೆ.

ನವದೆಹಲಿ,ಆಗಸ್ಟ್,15,2022(www.justkannada.in):   ದೇಶಕ್ಕೆ ಮುಂದಿನ 25 ವರ್ಷ ಮಹತ್ವಪೂರ್ಣ . 25 ವರ್ಷಕ್ಕಾಗಿ ಹೊಸಗುರಿಯೊಂದಿಗೆ ಮುನ್ನುಗ್ಗಬೇಕು . ಇದಕ್ಕೆ ಪ್ರತಿಯೊಬ್ಬ ನಾಗರೀಕನ ಪಾತ್ರ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಭಾರತಕ್ಕೆ ಇಂದು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಸತತ 9ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ  ಪ್ರಧಾನಮಂತ್ರಿ ನರೇಂದ್ರ ಮೋದಿ   ಭಾರತ ಪ್ರಜಾಪ್ರಭುತ್ವದ ತಾಯಿ. ನಮ್ಮ ದೇಶದ ವೈವಿಧ್ಯತೆಯೇ ಅದರ ಶಕ್ತಿ. ನಮ್ಮ ದೇಶವು ಅಮೂಲ್ಯವಾದ ಸಾಮರ್ಥ್ಯವನ್ನು ಹೊಂದಿದೆ. ಈ 75 ವರ್ಷಗಳ ಪ್ರಯಾಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದೆ  ಎಂದು ಹೇಳಿದರು.

ದೇಶದಲ್ಲಿ ಗುಲಾಮಗಿರಿಯ ಒಂದೆ ಒಂದು ಅಂಶವಿರಬಾರದು.  ಗುಲಾಮಗಿರಿತನದಿಂದ ಸಂಪೂರ್ಣವಾಗಿ ಮುಕ್ತವಾಗಬೇಕು.  ಭಾರತದ ಸಂವಿಧಾನ ರಚಿಸಿದವರಿಗೆ ಧನ್ಯವಾದಗಳು ಬಹಳ ರಾಜ್ಯಗಳು ದೇಶದ ಅಭಿವೃದ್ದಿಗ ಕೊಡಗು ನೀಡುತ್ತಿವೆ.  ದೇಶದ ಕನಸನ್ನ ಸಾಕಾರಗೊಳಿಸುವ ಶಕ್ತಿ ಯುವಕರಿಗಿದೆ. ಇಂದಿನ ಯುವಕರೇ ನಾಳಿನ ದೇಶದ ಅತಿದೊಡ್ಡ ಶಕ್ತಿ.  ಶತಮಾನೋತ್ಸವದ ವೇಳೆಗೆ ದೇಶ ಸುಭದ್ರವಾಗಲಿದೆ. ದೇಶದ ಸುಭದ್ರಗೋಳಿಸುವ  ಶಕ್ತಿ ಯುವಕರಿಗಿದೆ ಎಂದು ನುಡಿದರು.

ಕುಟುಂಬ ರಾಜಕಾರಣದ ಮನಸ್ಥಿತಿಯಿಂದ ಮುಕ್ತವಾಗಬೇಕು.  ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಭಯಸುತ್ತೇನೆ ಭ್ರಷ್ಟಾಚಾರದ ವಿರುದ್ಧ ಹೋರಾಟನಕ್ಕೆ ನನಗೆ ಬೆಂಬಲ ನೀಡಿ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಯುವಜನರಿಗೆ ಕರೆ ನೀಡಿದ ಪ್ರಧಾನಿ ಮೋದಿ,   ಭಾರತದ ಯುವಜನತೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವುದರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಪ್ರತಿಜ್ಞೆ ಮಾಡುವಂತೆ  ಹೇಳಿದರು.

ನಾರಿ ಶಕ್ತಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಝಲ್ಕರಿ ಬಾಯಿ, ರಾಣಿ ಚೆನ್ನಮ್ಮ, ಬೇಗಂ ಹಜರತ್ ಮಹಲ್ ಮುಂತಾದ ಭಾರತದ ಮಹಿಳೆಯರ ಶಕ್ತಿಯನ್ನು ನೆನಪಿಸಿಕೊಂಡಾಗ ಭಾರತ ಹೆಮ್ಮೆಯಿಂದ ಬೀಗುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಕೊಡುಗೆ, ಬಲಿದಾನವನ್ನು ನೆನಪಿಸಿಕೊಳ್ಳುವುದಾಗಿ ತಿಳಿಸಿದರು.

Key words: 75th Independence Day- celebrations –PM-Narendra modi