74ನೇ ಗಣರಾಜ್ಯೋತ್ಸವ : ಪಥಸಂಚಲನದಲ್ಲಿ ಎಲ್ಲರ ಗಮನ ಸೆಳೆದ ರಾಜ್ಯದ ‘ನಾರಿಶಕ್ತಿ’ ಸ್ತಬ್ದಚಿತ್ರ

ನವದೆಹಲಿ,ಜನವರಿ,26,2023(www.justkannada.in):  ಇಂದು 74ನೇ ಗಣರಾಜ್ಯೋತ್ಸವ ಹಿನ್ನೆಲೆ ನವದೆಹಲಿಯ ಕರ್ತವ್ಯಪಥದಲ್ಲಿ ವಿವಿಧ ಸೇನಾಪಡೆಗಳ ಪಥಸಂಚಲನ, 23 ಸ್ತಬ್ದಚಿತ್ರಗಳ ಪ್ರದರ್ಶನ, ವಿವಿಧ ಕಲಾತಂಡಗಳ ನೃತ್ಯಪ್ರದರ್ಶನದ ಮೂಲಕ ದೇಶದ ಸಾಂಸ್ಕೃತಿಕ ವೈಭವ ಅನಾವರಣಗೊಂಡಿತ್ತು.

ಈ ನಡುವೆ ಪಥಸಂಚಲನದಲ್ಲಿ ವಿಶೇಷವಾಗಿ ನಾರಿ ಶಕ್ತಿ ಪರಿಕಲ್ಪನೆಯಡಿಯಲ್ಲಿ ಕರ್ನಾಟಕ ತನ್ನ ಸ್ತಬ್ಧ ಚಿತ್ರ ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆಯಿತು  ಈ ಮೂಲಕ ಕರ್ನಾಟಕದ ಟ್ಯಾಬ್ಲೋ ರಾಜ್ಯದ 3 ಮಹಿಳಾ ಸಾಧಕರ ಅಸಾಧಾರಣ ಸಾಧನೆಗಳನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿದೆ. ಸೂಲಗಿತ್ತಿ ನರಸಮ್ಮ – ಸೂಲಗಿತ್ತಿ, ತುಳಸಿ ಗೌಡ ಹಾಲಕ್ಕಿ – ಸಾಲುಮರದ ತಿಮ್ಮಕ್ಕ ಅವರು ಸಮಾಜಕ್ಕೆ ಸಲ್ಲಿಸಿದ ಕೊಡುಗೆಯನ್ನ  ಸ್ತಬ್ದಚಿತ್ರದ ಮೂಲಕ ಸ್ಮರಿಸಲಾಯಿತು.

ಪಥಸಂಚಲನದಲ್ಲಿ ದೇಶದ ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಅನಾವರಣಗೊಂಡಿತ್ತು ರಾಜ್ಯ ,ಕೇಂದ್ರಾಡಳಿತ ಪ್ರದೇಶಗಳ 17 ಟ್ಯಾಬ್ಲೋಗಳು ಹಾಗೂ ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೊಗಳು ಪ್ರದರ್ಶನಗೊಂಡವು ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರಾ, ಪಶ್ಚಿಮ ಬಂಗಾಳ,
ಜಮ್ಮು,ಕಾಶ್ಮೀರ, ಲಡಾಖ್, ದಾದರ್ ನಗರ್ ಹವೇಲಿ, ದಮನ್ ಮತ್ತು ದಿಯು, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹದಿನೇಳು ರಾಜ್ಯಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಂಡವು. ಹಾಗೆಯೇ ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೊಗಳು ಸಹ ಭಾಗಿಯಾಗಿದ್ದವು.

Key words: 74th Republic Day-karnataka-tablo-Narishakti