74ನೇ ಗಣರಾಜ್ಯೋತ್ಸವ: ರಾಷ್ಟ್ರಪತಿಗಳಿಂದ ಧ್ವಜಾರೋಹಣ: ವಿವಿಧ ಸೇನಾಪಡೆಗಳಿಂದ ಪಥಸಂಚಲನ.

0
2

ನವದೆಹಲಿ,ಜನವರಿ,26,2023(www.justkannada.in): ದೇಶಾದ್ಯಂತ 74ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು ರಾಷ್ಟ್ರರಾಜಧಾನಿ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು  ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದಲ್ಲಿ ಮುಖ್ಯ ಅತಿಥಿ ಈಜಿಫ್ಟ್ ಅಧ್ಯಕ್ಷ  ಅಬ್ದೆಲ್ ಫತ್ತಾಹ್ , ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿಯಾದರು.

ಧ್ವಜಾರೋಹಣ ನೆರವೇರಿಸಿದ ಬಳಿಕ ರಾಷ್ಟ್ರಪತಿಗಳಿಗೆ  ಮೂರು ಸೇನಾಪಡೆಗಳಿಂದ ಗೌರವವಂದನೆ  ಸಲ್ಲಿಸಲಾಯಿತು.  ವಿವಿಧ ಸೇನಾಪಡೆಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು. ಇದೇ ಮೊದಲ ಬಾರಿಗೆ ಈಜಿಪ್ಟ್ ನ 144 ಯೋಧರು ಪರೇಡ್ ನಲ್ಲಿ ಪಾಲ್ಗೊಂಡಿದ್ದರು.

61 ಅಶ್ವದಳಗಳು , ಐದು ರೆಜಿಮೆಂಟ್ ನಿಂದ ಪಥ ಸಂಚಲನ ನಡೆಯಿತು. ಪಂಜಾಬ್ ರೆಜಿಮೆಂಟ್ ಬಿಹಾರ ರೆಜಿಮೆಂಟ್ ಗೋರ್ಖಾ ರೆಜಿಮೆಂಟ್, ಏರ್ ಮಿಸೈಲ್, ಆಕಾಶ್ ಮಿಸೈಲ್ ತಂಡ ಸೇರಿ ವಿವಿಧ ಸೇನಾಪಡೆಗಳು ಪಥಸಂಚಲನದಲ್ಲಿ ಭಾಗಿಯಾದವು. 23 ಸ್ತಬ್ದಚಿತ್ರಗಳು ಪ್ರದರ್ಶನಗೊಳ್ಳಲಿವೆ.

Key words: 74th Republic Day- Flag -hoisting – President:-Parade – various forces.