Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Cinema 70th National Film Awards: ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಮತ್ತು ಕಾಂತಾರಗೆ ಒಲಿದ ಎರಡು...

70th National Film Awards: ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಮತ್ತು ಕಾಂತಾರಗೆ ಒಲಿದ ಎರಡು ಪ್ರಶಸ್ತಿ

ನವದೆಹಲಿ,ಆಗಸ್ಟ್,16,2024 (www.jusykannada.in):  70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನ  ಕೇಂದ್ರ ವಾರ್ತಾ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಘೋಷಣೆ ಮಾಡಿದ್ದು, ಸ್ಯಾಂಡಲ್ ವುಡ್ ನಟ ರಿಷಭ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದಿದೆ.

ಹಾಗೆಯೇ ನಟ ರಿಷಭ್ ಶೆಟ್ಟಿ ಅಭಿನಯದ ಕನ್ನಡದ ಕಾಂತಾರ ಸಿನಿಮಾ ಅತ್ಯುತ್ತಮ ಜನಪ್ರಿಯ ಹಾಗೂ ಮನರಂಜನಾ ಚಿತ್ರವಾಗಿ ಎರಡು ವಿಭಾಗದಲ್ಲಿ  ಪ್ರಶಸ್ತಿ ಬಾಚಿಕೊಂಡಿದೆ. 2022ನೇ ಸಾಲಿನಲ್ಲಿ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗೈದ ಚಿತ್ರಗಳ ಪಟ್ಟಿಯನ್ನು ಕೇಂದ್ರ ವಾರ್ತಾ ಪ್ರಸಾರ ಮತ್ತು ಮಾಹಿತಿ ಸಚಿವಾಲಯ  ಪ್ರಕಟಿಸಿದ್ದು,  ‘ಕಾಂತಾರ’ ಸಿನಿಮಾದ ಅತ್ಯುತ್ತಮ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ದೊರೆತಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಅತ್ಯುತ್ತಮ ಕನ್ನಡ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಸಾಹಸ ನಿರ್ದೇಶನ ವಿಭಾಗದಲ್ಲೂ ಕೆಜಿಎಫ್-2 ಪ್ರಶಸ್ತಿ ಗೆದ್ದಿದೆ.

ರಾಷ್ಟ್ರೀಯ ಪ್ರಶಸ್ತಿ ಪಡೆದ ಇತರ ಚಿತ್ರಗಳು ಮತ್ತು ಕಲಾವಿದರ ಪಟ್ಟಿ ಹೀಗಿದೆ.

ಅತ್ಯುತ್ತಮ ಚಲನಚಿತ್ರ ಅಟ್ಟಂ (ಮಲಯಾಳಂ)

ಅತ್ಯುತ್ತಮ ನಿರ್ದೇಶಕ, ಸೂರಜ್ ಬರ್ಜಾತ್ಯ( ಉಂಚಾಯಿ ಚಿತ್ರ)

ಅತ್ಯುಮತ್ತ ನಟಿ- ನಿತ್ಯಾಮೆನನ್

ಅತ್ಯುತ್ತಮ ಸಿನಿಮಾ AVGC, ಬ್ರಹಾಸ್ತ್ರ (ಹಿಂದಿ)

ಅತ್ಯುತ್ತಮ ಫೀಚರ್ ಫಿಲ್ಮ್: ಕಚ್ ಎಕ್ಸ್‌ಪ್ರೆಸ್(ಗುಜರಾತಿ)

ಅತ್ಯುತ್ತಮ ಸಹಾಯಕ ನಟಿ- ನೀನಾ ಗುಪ್ತ

ಅತ್ಯುತ್ತಮ ಸಹಾಯಕ ನಟ- ಪವನ ರಾಜ್

Key words: 70th National Film Awards,  Rishabh Shetty, Best Actor, Kantara