ಅ.2 ರಂದು ಗುಜರಾತ್ ನಲ್ಲಿ ಶೆಪರ್ಡ್ ಇಂಡಿಯಾ  ಆರನೇ ವಾರ್ಷಿಕೋತ್ಸವ.

ಬೆಂಗಳೂರು,ಸೆಪ್ಟಂಬರ್,29,2021(www.justkannada.in): ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ ಆರನೇ ವಾರ್ಷಿಕೋತ್ಸವ ಸಮಾರಂಭ ಗುಜರಾತ್ ರಾಜ್ಯದ ಅಹಮದ್ ಬಾದ್ ನಗರದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಹೆಚ್.ವಿಶ್ವನಾಥ್,‌ ಅಂದು ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಉಕ್ಕು ಮತ್ತು‌ ಗಣಿ ರಾಜ್ಯ ಸಚಿವರಾದ ಘಗನ್ ಸಿಂಗ್, ಕಾನೂನು ರಾಜ್ಯ ಸಚಿರಾದ ಎಸ್.ಪಿ.ಸಿಂಗ್ ಬಘೇರ್, ಲೋಕೋಪಯೋಗಿ ರಾಜ್ಯ ಸಚಿವ  ದತ್ತಾತ್ರೇಯ ಭರಣಿ, ಗುಜರಾತ್ ನ ಉಪ ಸಭಾಪತಿ ಜೆಟಾ ಬಾಯಿ ಬಾರವಾಡೆ  ರಾಜ್ಯದ ಕುರುಬ ಸಮುದಾಯದ ಮುಖಂಡರಾದ ಎಚ್.ಎಂ.ರೇವಣ್ಣ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕುರುಬ ಜನಾಂಗದಲ್ಲಿ ಇತಿಹಾಸ ಕುರಿತು ಅರಿವು ಮೂಡಿಸಲು 2015 ಅಕ್ಟೋಬರ್‌ ಎರಡರಂದು ವಿದ್ಯುಕ್ತವಾಗಿ ಪ್ರಾರಂಭಿಸಲಾಗಿದೆ. ಎಥ್ಬಿಕ್ ಗ್ರೂಪ್ ನ ಸವಿ ನೆನಪಿಗಾಗಿ ಈ ಕಾರ್ಯಕ್ರಮವನ್ನು ಗುಜರಾತ್ ನಲ್ಲಿ ಆಯೋಜಿಸಲಾಗಿದೆ. ವಿವಿಧ ಹೆಸರುಗಳಿಂದ ಭಾರತದಲ್ಲಿ ಬದುಕು ಮಾಡುತ್ತಿರುವ 12ಕೋಟಿಗೂ ಅಧಿಕ ಸಮುದಾಯವನ್ನು ಒಂದೇ ವೇದಿಕೆಗೆ ತರುವ ಪ್ರಮಾಣಕ ಪ್ರಯತ್ನಕ್ಕಾಗಿ ಶೆಪರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಹುಟ್ಟು ಹಾಕಲಾಗಿದೆ. ಕೇಂದ್ರ ಸರ್ಕಾರಕ್ಕೆ ವಿವಿಧ ಹೆಸರಿನಲ್ಲಿ  ಗುರುತಿಸಿಕೊಂಡಿರುವ ಈ ಜನಾಂಗವನ್ನು ಒಂದೇ ಹೆಸರಿನಲ್ಲಿ  ಗುರುತಿಸುವ ಕಾರ್ಯ ಮಾಡಬೇಕು ಎಂದು ಆಗ್ರಹಿಸಿದರು.

ಮೈಸೂರು ದಸರಾ ಉತ್ಸವಕ್ಕೆ  ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರಿಂದ ಉದ್ಘಾಟಿಸಿತ್ತಿರುವುದು ಅತ್ಯಂತ ಸ್ವಾಗತಾರ್ಹವಾದದು. ಮೈಸೂರು ದಸರಾವನ್ನು ಅತ್ಯಂತ ಚಂದವಾಗಿ ವೈವಿದ್ಯಮಯವಾಗಿ ಆಚರಿಸಲು ಕಾರಣಕರ್ತರು ಎಂದು ಹೆಚ್.ವಿಶ್ವನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ರಾಜ್ಯಾಧ್ಯಕ್ಷ ಸಿ.ಎ.ನಾಗರಾಜು, ಮತ್ತಿತರರು ಹಾಜರಿದ್ದರು.

Key words:  6th Anniversary – Shepard India – Gujarat-MLC-H.vishwanath