63% ಕಮಿಷನ್ ಆರೋಪ: ಉಪಲೋಕಾಯುಕ್ತರ ಹೇಳಿಕೆ ಬಗ್ಗೆ ಕೇಂದ್ರ ಸಚಿವ ಹೆಚ್.ಡಿಕೆ ವ್ಯಂಗ್ಯ

ಮಂಡ್ಯ,ಡಿಸೆಂಬರ್,6,2025 (www.justkannada.in): ಸರ್ಕಾರದಲ್ಲಿ 63% ಕಮಿಷನ್ ಆರೋಪ ಸಂಬಂಧ ಉಪಲೋಕಾಯುಕ್ತರ ಹೇಳಿಕೆ ಕುರಿತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,  ಉಪಲೋಕಾಯುಕ್ತರು ಏನು ಕೆಲಸ ಮಾಡುತ್ತಿದ್ದಾರೆ. ಅವರ ಜವಾಬ್ದಾರಿ ಏನು? ಮಾಧ್ಯಮ ಮುಂದೆ ಹೇಳೋದಿಕ್ಕಷ್ಟೆ ಅಧಿಕಾರ ನೀಡಲಾಗಿದೆಯಾ?  ಇಲ್ಲಾ ದಾಖಲೆಗಳನ್ನುಸಂಗ್ರಹಿಸಿ ಕ್ರಮ ತೆಗೆದುಕೊಳ್ಳಬೇಕಿತ್ತಲ್ಲವಾ..? ಎಂದು ಲೇವಡಿ ಮಾಡಿದರು.

ಯಾರ ಕಾಲದಲ್ಲಿ ಭ್ರಷ್ಟಾಚಾರವಾಗಿದೆ.  ಭ್ರಷ್ಟಾಚಾರ ಗೊತ್ತಿದ್ದೂ ಹೇಳಿಕೆಗೆ ಸಿಮೀತರಾಗಿದ್ದಾರೆ ಹಾಗಾದರೇ ಪ್ರಯೋಜನವೇನು ಎಂದು ಹೆಚ್ ಡಿಕೆ ಪ್ರಶ್ನಿಸಿದರು.

ಉಪಲೋಕಾಯುಕ್ತರು  2019ರ ವರದಿ ಆಧರಿಸಿ ಹೇಳಿದ್ದು ಆ ವೇಳೆ ಬಿಎಸ್ ವೈ ನೇತೃತ್ವದ ಸರ್ಕಾರವಿತ್ತು ಆಗ ಬ್ರಷ್ಟಾಚಾರ ನಡೆದಿತ್ತು ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಈ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಗಿದೆ. ಅಡಳಿತ ಎಷ್ಟು ಪರಿಶುದ್ದ ಪಾರದರ್ಶಕ ಎಂಬ ಬಗ್ಗೆ ವರದಿ ಮಾಡಿಸಲಿ ಎಂದು ಟಾಂಗ್ ಕೊಟ್ಟರು.

Key words: 63% commission, allegation, Union Minister, HDK