ಮೈಸೂರಿನಲ್ಲಿ ಇಂದು 61 ಕೊರೋನಾ ಪಾಸಿಟಿವ್ ಸಾಧ್ಯತೆ: ಹೋಂ ಕ್ವಾರಂಟೈನ್ ಗೆ ಶಾಸಕ ರಾಮದಾಸ್ ಗೆ ಸೂಚನೆ…

ಮೈಸೂರು,ಜು,11,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದೂ ಸಹ ಕೊರೊನಾ ಅಟ್ಟಹಾಸ ಮುಂದುವರೆಯಲಿದೆ. ಇಂದು ಸಹ ಮಲ್ಲಿಗೆ ನಗರಿಯಲ್ಲಿ 61 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಬರುವ ಸಾಧ್ಯತೆ ಇದೆ.jk-logo-justkannada-logo

ಜಿಲ್ಲೆಯಲ್ಲಿ ನಗರ ಭಾಗ ಸೇರಿದಂತೆ ಗ್ರಾಮೀಣಾ ಭಾಗದಲ್ಲೂ ಕೊರೊನಾ ಹರಡುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಸಾರ್ವಜನಿಕ ಸೇವೆಯಲ್ಲಿರುವವರು, ಕೊರೊನಾ ವಾರಿಯರ್ಸ್ ಗೂ, ಪ್ರೈಮರಿ ಕಾಂಟ್ಯಾಕ್ಟ್ ಗಳಿಗೆ ಕಿಲ್ಲರ್ ಕೊರೋನಾ ವಕ್ಕರಿಸುತ್ತಿದೆ. ನಿನ್ನೆ ಮೈಸೂರಿನಲ್ಲಿ ಶಾಸಕ ಎಸ್‌. ಎ.ರಾಮದಾಸ್ ಅವರ ಆಪ್ತ ಸಹಾಯಕರು ಸೇರಿ 51 ಪ್ರಕರಣ ಪತ್ತೆಯಾಗಿತ್ತು.61-corona-positive-mysore-today

ಆಪ್ತ ಸಹಾಯಕರಿಗೆ ಕೊರೊನಾ ತಗುಲಿದ ಹಿನ್ನೆಲೆ. ಇಂದಿಂದನಿಂದ ಹೋಂ ಕ್ವಾರಂಟೈನ್ ಆಗುವಂತೆ ಶಾಸಕ ರಾಮದಾಸ್ ಅವರಿಗೆ ಅಧಿಕಾರಿಗಳು ತಿಳಿಸಿದ್ದಾರೆ, ಕಾಡಾ ಕಚೇರಿಯಲ್ಲಿರುವ ರಾಮ್‌ದಾಸ್ ಶಾಸಕರ ಕಚೇರಿ ಸೀಲ್‌ ಡೌನ್ ಆಗುವ ಸಾದ್ಯತೆ ಇದೆ. ವಿದ್ಯಾರಣ್ಯಪುರಂನ ಶಾಸಕರ ಕಚೇರಿಯೂ ಕೂಡ ಸೀಲ್‌ಡೌನ್  ಆಗುವ ಸಾದ್ಯತೆ ಇದೆ.

Key words: 61 Corona Positive- Mysore- today