58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ: ಪುರಸಭೆ, ಪ.ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಮೇಲುಗೈ.

ಬೆಂಗಳೂರು,ಡಿಸೆಂಬರ್,30,2021(www.justkannada.in):  ಡಿಸೆಂಬರ್ 27 ರಂದು ನಡೆದ 58 ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು,  ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ  ಕಾಂಗ್ರೆಸ್ ಮೇಲುಗೈ ಸಾಧಿಸುವ ಮೂಲಕ ಕಮಾಲ್ ಮಾಡಿದೆ.

ಡಿಸೆಂಬರ್ 27 ರಂದು ಐದು ನಗರಸಭೆಗಳಿಗೆ ಚುನಾವಣೆ ನಡೆದಿತ್ತು. ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ-ಬೆಟಗೇರಿ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ಹಾಗೂ ವಿಜಯನರ ಜಿಲ್ಲೆಯ ಹೊಸಪೇಟೆ ನಗರಸಭೆಯ ಫಲಿತಾಂಶ ಪ್ರಕಟಗೊಂಡಿದೆ. ಮತ್ತೊಂದ್ಕಡೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ ಭವಿಷ್ಯ ತೀರ್ಮಾನವಾಗಿದೆ. ಒಟ್ಟು 1185 ವಾರ್ಡ್‌ಗಳಲ್ಲಿ ಒಟ್ಟು 4ಸಾವಿರದ 961 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಎಲ್ಲರಾ ಭವಿಷ್ಯ ಪ್ರಕಟಗೊಂಡಿದೆ.RR Nagar- Shira by-election- result- BJP- lead

ರಾಜ್ಯದ 5 ನಗರಸಭೆಗಳ ಚುನಾವಣಾ ಫಲಿತಾಂಶ ಹೊರ ಬಿದಿದ್ದು 5 ನಗರಸಭೆಗಳ ಪೈಕಿ 3 ಬಿಜೆಪಿ ಪಾಲಾಗಿದೆ. ಹಾಗೂ 2 ನಗರಸಭೆ ಅತಂತ್ರವಾಗಿದೆ. ಗದಗ-ಬೆಟಗೇರಿ ನಗರಸಭೆ, ಚಿಕ್ಕಮಗಳೂರು ನಗರಸಭೆ ಬೆಂಗಳೂರಿನ ಹೆಬ್ಬಗೋಡಿ ನಗರಸಭೆ ಬಿಜೆಪಿ ಪಾಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆ, ತುಮಕೂರು ಜಿಲ್ಲೆಯ ಶಿರಾ ನಗರಸಭೆ ಫಲಿತಾಂಶ ಅತಂತ್ರವಾಗಿದೆ. 5 ನಗರಸಭೆಗಳ 166 ವಾರ್ಡ್‌ಗಳ ಪೈಕಿ 67ರಲ್ಲಿ ಬಿಜೆಪಿ ಗೆಲುವು, ಕಾಂಗ್ರೆಸ್ 61, ಜೆಡಿಎಸ್‌ 12 ವಾರ್ಡ್‌ಗಳಲ್ಲಿ ಗೆದಿದ್ದು 26 ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿದೆ.

19 ಪುರಸಭೆಗಳ ಫಲಿತಾಂಶ  ಹೀಗಿದೆ.

19 ಪುರಸಭೆಗಳ ಪೈಕಿ 8ರಲ್ಲಿ ಕಾಂಗ್ರೆಸ್  ವಿಜಯದ ಪತಾಕೆ ಹಾರಿಸಿದರೇ ಬಿಜೆಪಿ 6, ಜೆಡಿಎಸ್ 1 ಹಾಗೂ 4 ಅತಂತ್ರ ಫಲಿತಾಂಶ ಬಂದಿದೆ. ಪುರಸಭೆಯ 441 ವಾರ್ಡ್ ಗಳ ಪೈಕಿ 201 ವಾರ್ಡ್ ಗಳಲ್ಲಿ ಕಾಂಗ್ರೆಸ್ , 176 ವಾರ್ಡ್ ಗಳಲ್ಲಿ ಬಿಜೆಪಿ ಜೆಡಿಎಸ್ 21  ವಾರ್ಡ್ ಗಳಲ್ಲಿ ಇತರೇ 43 ವಾರ್ಡ್ ಗಳಲ್ಲಿ ಜಯ ಸಾಧಿಸಿದೆ.

ಇನ್ನು ರಾಜ್ಯದ 34 ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಹೀಗಿದೆ.

34 ಪಟ್ಟಣ ಪಂಚಾಯಿತಿಗಳ ಪೈಕಿ 12ರಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದೆ. 5 ಬಿಜೆಪಿ, 5 ಇತರರು, 10 ಪ.ಪಂ. ಫಲಿತಾಂಶ ಅತಂತ್ರವಾಗಿದೆ. ಎರಡು ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಬಾಕಿ ಇದೆ. ಪಟ್ಟಣ ಪಂಚಾಯತ್ ನ 577 ವಾರ್ಡ್ ಗಳ ಪೈಕಿ  ಬಿಜೆಪಿ 194  ಕಾಂಗ್ರೆಸ್ 236 , ಜೆಡಿಎಸ್ 12, ಇತರೆ 135 ವಾರ್ಡ್ ಗಳಲ್ಲಿ ಜಯಸಾಧಿಸಿದೆ.

Key words: 58 local bodies- Election -results -Congress.