ಮೈಸೂರಿನ ಮಾತೃಮಂಡಳಿ ವೃತ್ತ ನೆಲಸಮ.

0
1

ಮೈಸೂರು,ಡಿಸೆಂಬರ್,30,2021(www.justkannada.in): ಎರಡು ಬಣಗಳ ನಡುವೆ ಕಚ್ಚಾಟ ಹಿನ್ನೆಲೆ, ಮೈಸೂರಿನ ಮಾತೃಮಂಡಳಿ ವೃತ್ತವನ್ನ ನೆಲಸಮ ಮಾಡಲಾಗಿದೆ.

ಮಾತೃಮಂಡಳಿ ವೃತ್ತವನ್ನ ಡಾ.ಬಿ.ಆರ್ ಅಂಬೇಡ್ಕರ್  ಹಾಗೂ ಕುವೆಂಪು ಅವರ ವೃತ್ತ ಎಂದು ಎರಡು ಬಣಗಳ ನಡುವೆ ಕಿತ್ತಾಟ ಉಂಟಾಗಿತ್ತು, ಎರಡು ಬಣಗಳ ನಡುವೆ ಕಚ್ಚಾಟ ಉಂಟಾದ ಹಿನ್ನೆಲೆಯಲ್ಲಿ ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಮಾತೃಮಂಡಳಿ ವೃತ್ತವನ್ನ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.

ಪೊಲೀಸ್ ಸರ್ಪಗಾವಲಿನಲ್ಲಿ ವೃತ್ತ ತೆರವು ಕಾರ್ಯಾಚರಣೆ ನಡೆಯಿತು. ಇದೇ ವೇಳೆ ವೃತ್ತ ತೆರವು ಖಂಡಿಸಿ ತಡೆಯಲು ಆಗಮಿಸಿದ ಕೆಲ ಮುಖಂಡರನ್ನ ಪೊಲೀಸರು ಬಂಧಿಸಿದರು.

Key words: Demolition – Mysore-mathrumandali circle-police