ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 57 ಮಂದಿ ಶಾಸಕರು ಮಾತ್ರ ಹಾಜರು…

ಬೆಂಗಳೂರು,ಜು,9,2019(www.justkannada.in):  ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸಮ್ಮಿಶ್ರ ಸರ್ಕಾರವನ್ನ ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಯತ್ನ ಮುಂದುವರೆಸಿದ್ದು, ಈ ನಡುವೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ.

ಸಿಎಲ್ ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಕೇವಲ 57 ಮಂದಿ ಕಾಂಗ್ರೆಸ್ ಶಾಸಕರು ಹಾಜರಾಗಿದ್ದಾರೆ ಎನ್ನಲಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ ಸಂಖ್ಯಾಬಲ 78 ಇದೆ. ಆದರೆ ಇಂದಿನ ಸಭೆಯಲ್ಲಿ ಹಾಜರಾಗಿರುವುದು 57 ಮಂದಿ ಮಾತ್ರ.

ಇನ್ನು ಸಿಎಲ್ ಪಿ ಸಭೆಗೆ ಕಾಂಗ್ರೆಸ್ ಶಾಸಕರಾದ, ಸುಧಾಕರ್, ಎಂಟಿ.ಬಿ ನಾಗರಾಜ್, ಬಿ.ಕೆ ಸಂಗಮೇಶ್ವರ್,  ಅಂಜಲಿ ನಿಂಬಾಳ್ಕರ್, ಅನೇಕಲ್ ಶಾಸಕ ಶಿವಣ್ಣ,  ಪಕ್ಷದಿಂದ ಅಮಾನತಾಗಿರುವ ರೋಷನ್ ಬೇಗ್ ಅವರು ಗೈರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರೂ ಸಭೆಗೆ ಗೈರಾಗಿದ್ದಾರೆ.

Key words: 57 MLAs -Attend -Congressional –Legislative- Assembly- meeting