Thursday, August 20, 2026

BDA Apartments

Home Front Page ಬೆಂಗಳೂರಿನಲ್ಲಿ ನೀರು ಪೋಲು ಮಾಡಿದ್ರೆ ಬೀಳುತ್ತೆ 5 ಸಾವಿರ ರೂ. ದಂಡ.

ಬೆಂಗಳೂರಿನಲ್ಲಿ ನೀರು ಪೋಲು ಮಾಡಿದ್ರೆ ಬೀಳುತ್ತೆ 5 ಸಾವಿರ ರೂ. ದಂಡ.

ಬೆಂಗಳೂರು,ಮಾರ್ಚ್,8,2024(www.justkannada.in): ಬೆಂಗಳೂರಿನಲ್ಲಿ ಜಲಕ್ಷಾಮ ಆವರಿಸಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ನೀರು ಪೋಲು ಮಾಡುವವರಿಗೆ ದಂಡ ವಿಧಿಸಲು ಬೆಂಗಳೂರು ಜಲ ಮಂಡಳಿ (BWSSB) ನಿರ್ಧರಿಸಿದೆ.

ಹೌದು ಸಾರ್ವಜನಿಕರು ನೀರನ್ನ ಮಿತವಾಗಿ ಬಳಸುವಂತೆ BWSSB ಸೂಚನೆ ನೀಡಿದ್ದು, ನೀರುಪೊಲೂ ಮಾಡಿದರೇ  5 ಸಾವಿರ ರೂ.  ದಂಡ ವಿಧಿಸುವುದಾಗಿ ತಿಳಿಸಿದೆ. ಅಲ್ಲದೆ ಪದೇ ಪದೇ ನಿಯಮ ಮೀರಿದ್ರೆ ಹೆಚ್ಚುವರಿ ದಂಡ ವಿಧಿಸುವುದಾತಿ ತಿಳಿಸಿದೆ.

ವಾಹನದ ಸ್ವಚ್ಚತೆ, ರಸ್ತೆ ನಿರ್ಮಾಣ, ಕೈದೋಟ, ಕಟ್ಟಡ ನಿರ್ಮಾಣ, ಕಾರಂಜಿಗೆ ನೀರು ಬಳಸದಂತೆ BWSSB ಸೂಚನೆ ನೀಡಿದೆ.  ಜಲಕ್ಷಾಮ ಹಿನ್ನೆಲೆ ನೀರು ಮಿತವಾಗಿ ಬಳಸುವಂತೆ ಆದೇಶಿಸಿದೆ.

Key words: 5 thousand -rupees –fine- water – wasted – Bangalore