ದೇಶದಲ್ಲಿ ಒಂದೇ ದಿನ 45,892 ಹೊಸ ಕೋವಿಡ್ ಪ್ರಕರಣಗಳು ಪತ್ತೆ.

ನವದೆಹಲಿ,ಜುಲೈ,8,2021(www.justkannada.in): ದೇಶದಲ್ಲಿ ಇಳಿಮುಖದತ್ತ ಸಾಗಿದ್ದ ಕೊರೊನಾ ಸೋಂಕಿನ ಪ್ರಮಾಣ ಇದೀಗ ಮತ್ತೆ ಏರಿಕೆಯಾಗುತ್ತಿದೆ. ಹೌದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 45,892 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.jk

ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು,  ಒಂದೇ ದಿನದಲ್ಲಿ 45,892 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 817 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ದೇಶದ ಕೋವಿಡ್-19 ಸೋಂಕಿನ ಸಂಖ್ಯೆ 3,07,09,557 ಕ್ಕೆ ಏರಿಕೆಯಾಗಿದೆ. ಕೋವಿಡ್ ಸಾವಿನ ಸಂಖ್ಯೆಯನ್ನು 405,028 ಕ್ಕೆ ಏರಿದೆ.

ದೇಶದಲ್ಲಿ 460704 ಕೊರೋನಾ ಸಕ್ರಿಯ ಪ್ರಕರಣಗಳಿದ್ದು,ಒಟ್ಟು ಚೇತರಿಕೆಗಳ ಸಂಖ್ಯೆ 29,843,825, ಕಳೆದ 24 ಗಂಟೆಗಳಲ್ಲಿ 44,291  ಮಂದಿಯನ್ನ ಆಸ್ಪತ್ರೆಯಿಂದ  ಡಿಸ್ಚಾರ್ಜ್ ಮಾಡಲಾಗಿದೆ. ಈವರೆಗೆ 36,48,47,549 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

Key words: 45,892 Covid- new cases – detection – one day