Tuesday, August 11, 2026

BDA Apartments

Home Front Page ಈ ಬಾರಿ ಎನ್ ಡಿಎಗೆ 400ಕ್ಕೂ ಹೆಚ್ಚು ಸ್ಥಾನ: ಮೋದಿ ಮತ್ತೆ ಪ್ರಧಾನಿ ಆಗೋದು ಪಕ್ಕಾ-...

ಈ ಬಾರಿ ಎನ್ ಡಿಎಗೆ 400ಕ್ಕೂ ಹೆಚ್ಚು ಸ್ಥಾನ: ಮೋದಿ ಮತ್ತೆ ಪ್ರಧಾನಿ ಆಗೋದು ಪಕ್ಕಾ- ಬಿಜೆಪಿ ಅಭ್ಯರ್ಥಿ ಶ್ರೀರಾಮುಲು.

ಬಳ್ಳಾರಿ,ಮಾರ್ಚ್,20,2024(www.justkannada.in): ವಿರೋಧಿಗಳು ಏನೇ ಮಾಡಿದ್ರೂ  ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿ ಆಗೋದು ಪಕ್ಕಾ. ಈ ಬಾರಿ ಎನ್ ಡಿಎಗೆ 400ಕ್ಕೂ ಹೆಚ್ಚು ಸ್ಥಾನ ಸಿಗಲಿದೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ನುಡಿದರು.

ಇಂದು ಮಾತನಾಡಿದ ಶ್ರೀರಾಮುಲು, ಬಳ್ಳಾರಿ ಭಾಗದಲ್ಲಿ ನದಿ ಇದ್ದರೂ ಕುಡಿಯಲು ನೀರಿಲ್ಲ ಈ ಭಾಗದ ಜನರ ಸಮಸ್ಯೆ ದೂರ ಮಾಡಲು ನಾನು ಯೋಜನೆ ರೂಪಿಸಿದ್ದೇನೆ.  ಹೀಗಾಗಿ ಈ ಬಾರಿ ನನ್ನ ಬೆಂಬಲಿಸಿ  ಎಂದು ಮನವಿ ಮಾಡಿದರು.

ಟಿಕೆಟ್ ಕೈತಪ್ಪಿದ್ದಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಡಾಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಶ್ರೀರಾಮುಲು, ಈಶ್ವರಪ್ಪ ಬಿಜೆಪಿ ಬಿಟ್ಟು ಹೋಗಲ್ಲ ಎಂಬ ವಿಶ್ವಾಸವಿದೆ. ಈಶ್ವರಪ್ಪ ಅಸಮಾಧಾನಗೊಂಡ ಬಗ್ಗೆ ತಿಳಿದುಕೊಂಡಿದ್ದೇನೆ.  ನಾನು ಈಶ್ವರಪ್ಪರನ್ನ ಸಂಪರ್ಕ ಮಾಡಲು ಸಮಯ ಸಿಕ್ಕಿಲ್ಲ. ಹಿರಿಯ ಮುಖಂಡರು ಮನವೊಲಿಸುವ ಕೆಲಸ ಮಾಡುತ್ತಾರೆ ಎಂದರು.

Key words: 400 seats -NDA -Modi – become -Prime Minister- again – BJP candidate- Sriramulu.