Monday, October 26, 2026

Dasara Wishes

ಇಂದು ದೆಹಲಿಗೆ ಸಿಎಂ ಸಿದ್ದರಾಮಯ್ಯ DasraWishes_JK DasraWishes JK
Happy Dasara
Home Crime ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: 3 ರೈತರ ಧಾರುಣ ಸಾವು

ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: 3 ರೈತರ ಧಾರುಣ ಸಾವು

ಮೈಸೂರು, ನವೆಂಬರ್ 06, 2022 (justkannada.in):ಸೆಸ್ಕ್ ಅಧಿಕಾರಿಗಳ ನಿರ್ಲಕ್ಷಕ್ಕೆ 3ಜನ ರೈತರ ದಾರುಣ ಸಾವು ಸಂಭವಿಸಿದೆ.

ವಿದ್ಯುತ್ ತಂತಿ ತಗುಲಿ ಮೂವರು ಇಂದು ಮೃತಪಟ್ಟಿದ್ದಾರೆ.
ತಾಲ್ಲೂಕಿನ ನಿಲಸೋಗೆ ಗ್ರಾಮದ ಬಳಿ ಘಟನೆ ಈ ಘಟನೆ ನಡೆದಿದೆ.
ತಿ.ನರಸೀಪುರ ನಿಲಸೋಗೆ ಗ್ರಾಮದ ರಾಚೆಗೌಡ(60), ಹರೀಶ್(33), ಮಹದೇವಸ್ವಾಮಿ(38) ಮೃತ ದುರ್ದೈವಿಗಳು.

ರಾಚೆಗೌಡರ ಜಮೀನಿಗೆ ಔಷಧಿ ಸಿಂಪಡನೆ ಮಾಡುವ ವೇಳೆ ಘಟನೆ ನಡೆದಿದೆ. ಘಟನೆ ನಡೆದು ಹಲವು ಗಂಟೆ ಕಳೆದರು ಸ್ಥಳಕ್ಕೆ ಸೆಸ್ಕ್ ಅಧಿಕಾರಿಗ ಆಗಮಿಸಲಿಲ್ಲ‌‌ ಎಂದು‌‌ ಸ್ಥಳೀಯರು‌ ಅಸಮಾಧಾನ ‌ವ್ಯಕ್ತಪಡಿಸಿದ್ದಾರೆ.

ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ‌ ಮುಗಿಲು ಮುಟ್ಟಿತ್ತು.
ಮೃತ ವ್ಯಕ್ತಿಗಳ ಸಾವಿಗೆ ನ್ಯಾಯ ಕೊಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೆಸ್ಕ್‌ನವರ ನಿರ್ಲಕ್ಷ್ಯವಿದ್ದರೆ ಕ್ರಮ: ಎಂಡಿ ಜಯವಿಭವಸ್ವಾಮಿ:ವಿದ್ಯುತ್ ತಂತಿ ತುಳಿದು ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಪರಿಹಾರ ನೀಡಲು ಸೂಚಿಸಲಾಗಿದ್ದು. ವಿದ್ಯುತ್ ಮಾರ್ಗ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಲ್ಲೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ( ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಜಯವಿಭಯಸ್ವಾಮಿ ತಿಳಿಸಿದ್ದಾರೆ.

ಬೆಳಗಿನ ಜಾವ ೪ರಿಂದ ಬೆಳಗ್ಗೆ ೧೧ರವರೆಗೆ ಪಂಪ್‌ಸೆಟ್‌ಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ವೇಳೆ ರೈತರು ಸಹಜವಾಗಿ ಜಮೀನು ಕಡೆ ಬರುತ್ತಾರೆ. ಈ ರೀತಿ ಬಂದಾಗಲೇ ತಿ.ನರಸೀಪುರ ತಾಲ್ಲೂಕಿನ ನಿಲಸೋಗೆಯಲ್ಲಿ ದುರಂತ ನಡೆದಿದೆ. ಇದು ಎಲ್‌ಟಿ ಮಾರ್ಗವಾಗಿರುವುದರಿಂದ ಅಷ್ಟಾಗಿ ವಿದ್ಯುತ್ ಪ್ರವಾಹ ಇರುವುದಿಲ್ಲ. ಆದರೂ ದುರಂತ ಸಂಭವಿಸಿರುವುದು ವಿಷಾದನೀಯ.ಎಲೆಕ್ಟ್ರಿಕಲ್ ವಿಭಾಗದವರು ತನಿಖೆ ನಡೆಸಿ ನೀಡುವ ವರದಿ ಆಧರಿಸಿ ನಮ್ಮವರ ತಪ್ಪಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವರ್ಷಕ್ಕೆ ಸೆಸ್ಕ್ ವ್ಯಾಪ್ತಿಯಲ್ಲೇ ೭೦ರಿಂದ ೮೦ ಮಂದಿ ವಿದ್ಯುತ್ ಶಾಕ್‌ನಿಂದ ಮೃತಪಡುತ್ತಿದ್ದಾರೆ. ಗಾಯಗೊಳ್ಳುವ ಪ್ರಕರಣಗಳ ಸಂಖ್ಯೆ ೧೫೦ಕ್ಕೂ ಹೆಚ್ಚಿದೆ. ಮುನ್ನೆಚ್ಚರಿಕೆ ವಹಿಸಿ ಜಾಗೃತಿ ಮೂಡಿಸಿದರೂ ಘಟನೆಗಳು ನಡೆಯುತ್ತಿವೆ. ಆದರೆ
ಸೆಸ್ಕ್‌ನ ೧೭ ವರ್ಷದ ಇತಿಹಾಸದಲ್ಲಿ ಈವರೆಗೂ ಒಂದೇ ಕಡೆ ವಿದ್ಯುತ್ ದುರಂತಕ್ಕೆ ಮೂವರು ಮೃತಪಟ್ಟಿದ್ದು ಇದೇ ಮೊದಲು. ಸೆಸ್ಕ್ ಇದನ್ನು ಗಂಭೀರವಾಗಿ ಸ್ವೀಕರಿಸಿದೆ. ೫ ಲಕ್ಷ ರೂ.ವರೆಗೂ ಪರಿಹಾರ ನೀಡಲು ನಮ್ಮ ವ್ಯಾಪ್ತಿಯಲ್ಲಿ ಅವಕಾಶವಿದೆ. ಹೆಚ್ಚಿನ ಪರಿಹಾರ ನೀಡಬೇಕೆಂದರೆ ಮಂಡಳಿ ಸಭೆಯಲ್ಲಿ ತೀರ್ಮಾನ ಆಗಬೇಕಾಗುತ್ತದೆ. ಈ ಕುರಿತು ಮಂಡಳಿ ಸಭೆಯಲ್ಲೂ ಚರ್ಚಿಸಿ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇವೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ಪರಿಹಾರ ಹೆಚ್ಚಿಸಿಕೊಂಡ ಪ್ರಕರಣಗಳೂ ಇದ್ದು, ಅದನ್ನು ಸೆಸ್ಕ್ ಮಾನ್ಯ ಮಾಡಿದೆ ಎಂದು ತಿಳಿಸಿದ್ದಾರೆ.