Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮೊರಾಕೊದಲ್ಲಿ ಪ್ರಬಲ ಭೂಕಂಪನಕ್ಕೆ 296 ಮಂದಿ ಬಲಿ: ಪ್ರಧಾನಿ ಮೋದಿ ಸಂತಾಪ.

ಮೊರಾಕೊದಲ್ಲಿ ಪ್ರಬಲ ಭೂಕಂಪನಕ್ಕೆ 296 ಮಂದಿ ಬಲಿ: ಪ್ರಧಾನಿ ಮೋದಿ ಸಂತಾಪ.

ನವದೆಹಲಿ,ಸೆಪ್ಟಂಬರ್,9,2023(www.justkannada.in): ಮೊರಾಕೊದಲ್ಲಿ ಪ್ರಬಲ ಭೂಕಂಪನ ಸಂಭವಿಸಿ 296 ಮಂದಿ ಬಲಿಯಾಗಿದ್ದು, ಮೃತರಿಗೆ   ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ‘ಮೊರಾಕೊದಲ್ಲಿ ಸಂಭವಿಸಿದ ಭೂಕಂಪದಿಂದ ಹಲವರು ಪ್ರಾಣ ಕಳೆದಿದ್ದು, ತೀವ್ರ ನೋವಾಗಿದೆ. ನನ್ನ ಆಲೋಚನೆಗಳು ಮೊರೊಕ್ಕೊ ಜನರೊಂದಿಗೆ ಇವೆ. ಇಂತಹ ಕಷ್ಟದ  ಸಂದರ್ಭದಲ್ಲಿ ಮೊರಾಕೊಗೆ ನೆರವು ನೀಡಲು ಸಿದ್ಧರಿದ್ದೇವೆ. ಸಾಧ್ಯವಿರುವ ಎಲ್ಲಾ ನೆರವು ನೀಡುತ್ತೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಸಂತಾಪ ಸೂಚಿಸಿದ್ದಾರೆ.ಮೊರಾಕೊದಲ್ಲಿ ಪ್ರಬಲ ಭೂಕಂಪನಕ್ಕೆ 296 ಮಂದಿ ಬಲಿ: ಪ್ರಧಾನಿ ಮೋದಿ ಸಂತಾಪ pm modi

ಮೊರಾಕೊದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ  ಪ್ರಬಲ ಭೂಕಂಪದಲ್ಲಿ, 296 ಜನ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ  6.8ರಷ್ಟು ತೀವ್ರತೆ ದಾಖಲಾಗಿದೆ.

Key words: 296 death-powerful earthquake – Morocco-Condolences-PM Modi