Monday, September 14, 2026

BDA Apartments

Home Front Page 2023ಕ್ಕೆ ರಾಜ್ಯದ ಜನ ಬಿಜೆಪಿ ಸರ್ಕಾರವನ್ನ ಕಿತ್ತೆಸೆಯುತ್ತಾರೆ- ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗು.

2023ಕ್ಕೆ ರಾಜ್ಯದ ಜನ ಬಿಜೆಪಿ ಸರ್ಕಾರವನ್ನ ಕಿತ್ತೆಸೆಯುತ್ತಾರೆ- ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗು.

ಬಳ್ಳಾರಿ,ಅಕ್ಟೋಬರ್,15,2022(www.justkannada.in):  2023ಕ್ಕೆ ರಾಜ್ಯದ ಜನ ಬಿಜೆಪಿ ಸರ್ಕಾರವನ್ನ ಕಿತ್ತೆಸೆಯುತ್ತಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗುಡುಗಿದ್ಧಾರೆ.

ಬಳ್ಳಾರಿಯಲ್ಲಿ ನಡೆದ ಭಾರತ್ ಜೋಡೋ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ.  ಇದು ಚುನಾವಣಾ ಉದ್ದೇಶಕ್ಕೆ ಕೈಗೊಂಡ ಪಾದಯಾತ್ರೆ ಅಲ್ಲ.  ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ನಡೆಯುತ್ತಿರುವ ಯಾತ್ರೆ.  ಭಾರತ ಜೋಡೋ ಇದೊಂದು ಐತಿಹಾಸಿಕ ಪಾದಯಾತ್ರೆ.  ಐಕ್ಯತಾಯಾತ್ರೆ ಸಾವಿರ ಕಿಲೋಮೀಟರ್ ತಲುಪಿದೆ ಎಂದರು.2023ಕ್ಕೆ ರಾಜ್ಯದ ಜನ ಬಿಜೆಪಿ ಸರ್ಕಾರವನ್ನ ಕಿತ್ತೆಸೆಯುತ್ತಾರೆ siddaramaiah

ದೇಶದಲ್ಲಿ ಧರ್ಮ ಜಾತಿ ಹೆಸರಲ್ಲಿ ವಿಷಬೀಜ ಬಿತ್ತಲಾಗುತ್ತಿದೆ.  ದ್ವೇಷ ಹಿಂಸೆಯ ರಾಜಕಾರಣದಿಂದ ಜನ ಆತಂಕದಲ್ಲಿದ್ದಾರೆ. ಸಂಘ ಪರಿವಾರ ಹಿಂದೂಸಂಘಟನೆಗಳು ಆತಂಕ ಸೃಷ್ಠಿ ಮಾಡುತ್ತಿವೆ. ಬಡವರು ದಲಿತರು ಹಿಂದುಳಿದವರು ಆತಂಕದಲ್ಲಿದ್ದಾರೆ.  ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.

Key words: 2023 – people – BJP- government-Former CM- Siddaramaiah