Sunday, September 20, 2026

BDA Apartments

ಜಿಂದಾಲ್ ಕಂಪನಿಯಿಂದ 20 ಕೋಟಿ ರೂ. ಚೆಕ್ ಪಡೆದ ಆರೋಪ ಕುರಿತು ಸಿಎಂ ಹೆಚ್.ಡಿ ಕುಮಾ...
Home Front Page ಜಿಂದಾಲ್ ಕಂಪನಿಯಿಂದ 20 ಕೋಟಿ ರೂ. ಚೆಕ್ ಪಡೆದ ಆರೋಪ ಕುರಿತು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ...

ಜಿಂದಾಲ್ ಕಂಪನಿಯಿಂದ 20 ಕೋಟಿ ರೂ. ಚೆಕ್ ಪಡೆದ ಆರೋಪ ಕುರಿತು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ತಿರುಘೇಟು ನೀಡಿದ ಬಿಎಸ್ ಯಡಿಯೂರಪ್ಪ..

ಬೆಂಗಳೂರು,ಜೂ,18,2019(www.justkannada.in):  ಜಿಂದಾಲ್ ಕಂಪನಿಯಿಂದ 20 ಕೋಟಿ ರೂ. ಪಡೆದಿದ್ದರು ಎಂದು ತಮ್ಮ ಮೇಲೆ ಆರೋಪ ಮಾಡಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಟ್ವೀಟರ್ ನಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ  ವಾಗ್ದಾಳಿ ನಡೆಸಿರುವ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಹೊಣೆಗೇಡಿತನದ ಹೇಳಿಕೆ ನೀಡೋದು ಸರಿಯಲ್ಲ. ಎಲ್ಲಾ ಆರೋಪಗಳಿಂದ ಸಿಬಿಐ ಕೋರ್ಟ್ ನನ್ನನ್ನ ಖುಲಾಸೆಗೊಳಿಸಿದೆ. ಕೋರ್ಟ್ ಪ್ರಶ್ನಿಸುವಂತಹ ಹಗುರಮಾತುಗಳನ್ನಾಡಬೇಡಿ. ಆಡಳಿತ ಸಂಪೂರ್ಣ ವಿಫಲರಾಗಿ, ದಿಕ್ಕೆಟ್ಟಿರುವ ನೀವು, ನಿಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು  ಕಿಡಿಕಾರಿದ್ದಾರೆ.

ಬಿಎಸ್ ವೈ ಸಿಎಂ ಆಗಿದ್ದಾಗ ಜಿಂದಾಲ್ ನಿಂದ 20 ಕೋಟಿ ರೂ. ಅನ್ನು ಚೆಕ್ ಮೂಲಕ ಪಡೆದಿದ್ದರು.  ಜಿಂದಾಲ್ ಗೆ ಭೂಮಿ ಲೀಸ್ ಡೀಡ್ ಮಾಡಿಕೊಡಲಾಗಿತ್ತು. ಆದರೆ ಈಗ ಅವರೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದರು.

Key words: 20 crores -Jindal Company- BS Yeddyurappa -CM HD Kumaraswamy –allegations