ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳ ಭರ್ತಿ ಯಾವಾಗ? ಸರ್ಕಾರಕ್ಕೆ ಕುಟುಕಿದ ಬಿಜೆಪಿ

ಬೆಂಗಳೂರು,ಡಿಸೆಂಬರ್,3,2025 (www.justkannada.in): ಕಳೆದ ಎರಡುವರೆ ವರ್ಷದಿಂದ ಸರಿಯಾಗಿ ನೇಮಕಾತಿ ಮಾಡದ ಹಿನ್ನೆಲೆ ಹಾಗೂ ಕಳೆದ ಒಂದುವರ್ಷದಿಂದ ಒಳಮೀಸಲಾತಿ ನೆಪದಲ್ಲಿ ನೇಮಕಾತಿಗಳನ್ನ ತಡೆ ಹಿಡಿದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ದ ಉದ್ಯೋಗಾಕಾಂಕ್ಷಿಗಳು ಸಿಡಿದೆದ್ದಿದ್ದು ಎರಡು ದಿನಗಳ ಹಿಂದೆ ಧಾರವಾಡದಲ್ಲಿ ಬೃಹತ್ ಹೋರಾಟ ನಡೆಸಿದ್ದರು. ಈ ಕುರಿತು ಇದೀಗ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

ಸಿದ್ದರಾಮಯ್ಯನವರೇ ರಾಜ್ಯದಲ್ಲಿ 2.5 ಲಕ್ಷ ಖಾಲಿಯಿರುವ ಹುದ್ದೆ ಭರ್ತಿ ಮಾಡುವುದು ಯಾವಾಗ? ಎಂದು ಬಿಜೆಪಿ ಪ್ರಶ್ನಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ,

ಶಿಕ್ಷಣ ಇಲಾಖೆ

80 ಸಾವಿರ ಹುದ್ದೆ ಖಾಲಿ

ಆರೋಗ್ಯ ಇಲಾಖೆ

37 ಸಾವಿರ ಹುದ್ದೆ ಖಾಲಿ

ಕಂದಾಯ ಇಲಾಖೆ

10 ಸಾವಿರ ಹುದ್ದೆ ಖಾಲಿ

ಗ್ರಾಮೀಣಾಭಿವೃದ್ಧಿ ಇಲಾಖೆ

10 ಸಾವಿರ ಹುದ್ದೆ ಖಾಲಿ

ಪ.ಜಾತಿಗಳ ಕಲ್ಯಾಣ ಇಲಾಖೆ

10 ಸಾವಿರ ಹುದ್ದೆ ಖಾಲಿ

ರಾಜ್ಯದ ವಚನಭ್ರಷ್ಟ ಕಾಂಗ್ರೆಸ್  ಸರ್ಕಾರ ಸುಳ್ಳಿನ ಕಾರ್ಖಾನೆ ಎಂಬುದು ಮತ್ತೊಮ್ಮೆ ಬಯಲಾಗಿದೆ. ಸರ್ಕಾರಿ ಕೆಲಸ ಕೇಳಿದ ಉದ್ಯೋಗಾಕಾಂಕ್ಷಿಗಳಿಗೆ ಸುಳ್ಳುಬುರುಕ ಸಿದ್ದರಾಮಯ್ಯನವರ ಸರ್ಕಾರ ಕೊಟ್ಟಿದ್ದು ಬರೀ ಲಾಠಿ ಏಟು ಮಾತ್ರ.! ಸಿದ್ದರಾಮಯ್ಯನವರೇ 2.5 ಲಕ್ಷ ಖಾಲಿಯಿರುವ ಹುದ್ದೆ ಭರ್ತಿ ಮಾಡುವುದು ಯಾವಾಗ? ಎಂದು ಬಿಜೆಪಿ ಕಿಡಿಕಾರಿದೆ.

Key words: 2.5 lakh, government, vacant, posts, BJP