ಸಾಹೋ ಮೊದಲ ವಾರದ ಕಲೆಕ್ಷನ್ ಬರೋಬ್ಬರಿ 190 ಕೋಟಿ !

ಹೈದರಾಬಾದ್ , ಸೆಪ್ಟೆಂಬರ್ 04, 2019 (www.justkannada.in): ಸಾಹೋ ಮೊದಲ ವಾರದ ವೀಕೆಂಡ್ ಕಲೆಕ್ಷನ್ ಬರೋಬ್ಬರಿ 190 ಕೋಟಿ ರೂ. !

ರಜನಿಕಾಂತ್ ಅಭಿನಯದ 2.0 ದಾಖಲೆಯನ್ನು ಸಾಹೋ ಮುರಿದಿದೆ. ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಈಗಾಗಲೇ ಹಿಂದಿಯಲ್ಲೇ ಸಾಹೋ 79 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಕೇವಲ ಹಿಂದಿ ಭಾಷೆಯಲ್ಲೇ ಈ ಸಿನಿಮಾ 100 ಕೋಟಿ ರೂ. ಗಳಿಕೆ ಮಾಡುವ ಹಂತದಲ್ಲಿದೆ.