ಕೊರೋನಾ ಮಹಾಮಾರಿಗೆ 105 ವರ್ಷದ ವೃದ್ಧೆ ಮತ್ತು ಮಹಿಳೆ ಬಲಿ…

ಬೆಂಗಳೂರು,ಜು,25,2020(www.justkannada.in):  ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಉಲ್ಬಣವಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗಿತ್ತಿದೆ. ಈ ನಡುವೆ ಕೊರೋನಾ ಸೋಂಕಿಗೆ ಬೆಂಗಳೂರಿನಲ್ಲಿ 105 ವರ್ಷದ ವೃದ್ಧೆ ಬಲಿಯಾಗಿದ್ದಾರೆ.jk-logo-justkannada-logo

ಬೆಂಗಳೂರಿನ ಬಸವೇಶ್ವರ ನಗರ ನಿವಾಸಿ 105 ವರ್ಷ ವೃದ್ಧಿ ಕೊರೋನಾಗೆ ಸಾವನ್ನಪ್ಪಿದ್ದಾರೆ ಹಾಗಯೇ ಕೊಪ್ಪಳದಲ್ಲೂ ಕೊರೋನಾ ಒಂದು ಬಲಿ ಪಡೆದಿದೆ. ಗಂಗಾವತಿ ಟೌನ್ ನಿವಾಸಿ 40 ವರ್ಷದ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಮಹಿಳೆಗೆ ತೀವ್ರ ಉಸಿರಾಟದ ತೊಂದರೆ ಇತ್ತು. ನಿನ್ನೆ ಮಹಿಳೆಯನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸಿದ ಒಂದು ಗಂಟೆಯಲ್ಲೇ ಮಹಿಳೆ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words:  105-year-old- woman –death-Corona